Tadas Crime News: ಶಿಗ್ಗಾವಿ ತಾಲೂಕಿನ ತಡಸ ಪೊಲೀಸರು ಅದೇಲ್ಲಿಗೆ ಹೋಗಿ ಅದೇನು ಕಡಿದು ಗುಡ್ಡೆ ಹಾಕ್ತಿದಾರೋ ಏನೋ ಯಾರಿಗೂ ಅರ್ಥವಾಗ್ತಿಲ್ಲ.. ಈ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆಯಬಾರದ ಅಡ್ಡಕಸುಬುಗಳು, ಅಕ್ರಮಗಳು ಎಗ್ಗಿಲ್ಲದಂತೆ ನಡೆಯುತ್ತಿವೆ. ಮಟ್ಕಾ ಅನ್ನೋದು ಈ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆ ಮಾತಾಗಿದೆ. ಮದ್ಯ ಅನ್ನೋದು ಇಲ್ಲಿನ ಹಳ್ಳಿಗಳ ಕಿರಾಣಿ ಅಂಗಡಿಗಳಲ್ಲೂ ಎಗ್ಗಿಲ್ಲದೇ ಬಿಕರಿ ಆಗ್ತಿದೆ. ಇನ್ನು ಇಸ್ಪೀಟು ಅಡ್ಡೆಗಳು ಕಾಡಿನ ನಡುವೆ ಸಂತೆ ಮಾಡ್ತಿವೆ. ದುಂಢಸಿ ಕಾಡಲ್ಲಿ ಅಂದರ್ ಬಾಹರ್..! ಇನ್ನು...
Top Stories
ಮುಂಡಗೋಡಿನ ಕೂರ್ಲಿ ಜಂಬೆಕೊಪ್ಪದಲ್ಲಿ ಕಾಡಾನೆಗಳ ಹಾವಳಿ: ಬೆಳೆ ನಾಶ, ಪರಿಹಾರಕ್ಕೆ ರೈತರ ಆಗ್ರಹ
ಮುಂಡಗೋಡಿನ ಜ್ಯುವೆಲ್ಲರಿಯಲ್ಲಿ ಕಾಲುಚೈನು ದೋಚಿದ್ದ ಇಬ್ಬರು ಖತರ್ನಾಕ “ಶಾಂತಾ” ಬಾಯಿಗಳ ಬಂಧನ..!
ಮುಂಡಗೋಡ; ನೀರಿನ ಮೋಟಾರ್ ಗೆ ಕರೆಂಟ್ ವೈಯರ್ ಹಾಕುವಾಗ ವಿದ್ಯುತ್ ಶಾಕ್ ತಗುಲಿ ಗೃಹಿಣಿ ಸಾವು..!
ಕೊನೆಗೂ ಅಂತ್ಯಗೊಂಡ ಕಬ್ಬು ಬೆಳೆಗಾರರ 2 ತಿಂಗಳ ಹೋರಾಟ, ಪ್ರಾಫಿಟ್ ಶೇರಿಂಗ್ ಸೂತ್ರ ಜಾರಿ..!
ಇಂದಿರಾನಗರದ ಬಳಿ ನಿಂತಿದ್ದ ಟ್ರಾಕ್ಟರ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ, ಓರ್ವನ ಕಾಲಿಗೆ ತೀವ್ರ ಗಾಯ..!
ಕಬ್ಬಿಗೆ ₹3,600 ಬೆಲೆ ಘೋಷಿಸಿದ ಸಚಿವ ಸತೀಶ್ ಜಾರಕಿಹೊಳಿ: ₹3,650ಕ್ಕೆ ರೈತರ ಪಟ್ಟು, ನಿಷೇಧಾಜ್ಞೆ ನಡುವೆಯೂ ಹೋರಾಟ ಮುಂದುವರಿಕೆ
ಮಗಳ ಅಗಲಿಕೆಯ ನೋವಿನಲ್ಲೂ ಸಾರ್ಥಕತೆ ಮೆರೆದ ತಂದೆ, ಮುಂಡಗೋಡಿನಲ್ಲಿ ಉಚಿತ ಕುಡಿಯುವ ನೀರಿನ ಘಟಕ ಲೋಕಾರ್ಪಣೆ..!
ಕಾರವಾರ ಸಮೀಪ ಭೀಕರ ಬೈಕ್ ಅಪಘಾತ: ಸ್ಥಳದಲ್ಲೇ ಇಬ್ಬರು ಯುವಕರು ದಾರುಣ ಸಾವು..!
ಬೆಳಗಾವಿಯಲ್ಲಿ ಇಂದು ರೈತರ ‘ಜೈಲ್ ಭರೋ ಪಾದಯಾತ್ರೆ’ ಹಿನ್ನೆಲೆ, ರಾಷ್ಟ್ರೀಯ ಹೆದ್ದಾರಿ ಬಂದ್ಗೆ ಜಿಲ್ಲಾಡಳಿತ ನಿಷೇಧ..!
ಕಾರವಾರ: ಕಾಳಿ ಸೇತುವೆ ಮೇಲೆ ಭೀಕರ ಅಪಘಾತ, ಸ್ಕೂಟಿ ಸವಾರ ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ..!
ಸಹಕಾರಿ ರಂಗದ ಆದರ್ಶ ಕೃಷಿಕ, ಪ್ರಗತಿಪರ ರೈತ ರುದ್ರಪ್ಪ ಬಡಿಗೇರ: ಬದುಕೇ ಒಂದು ಸಾರ್ಥಕ ಸಾಧನೆಯ ಕಥನ..!
ಅಥಣಿಯಲ್ಲಿ ಅಕ್ರಮ ಪಿಸ್ತೂಲ್ ಮಾರಾಟ ಜಾಲ ಪತ್ತೆ; ಇಬ್ಬರ ಬಂಧನ
ಬೈಕ್ ಕಳ್ಳತನ ಪ್ರಕರಣ ಭೇದಿಸಿದ ಹಳಿಯಾಳ ಪೊಲೀಸರು, ಇಬ್ಬರು ಆರೋಪಿಗಳ ಬಂಧನ..!
ಕಬ್ಬು ಬೆಳೆಗಾರರ ಕರ್ನಾಟಕ ಬಂದ್ಗೆ ಬೆಂಬಲ, ಮುಂಡಗೋಡ ಶಿವಾಜಿ ಸರ್ಕಲ್ನಲ್ಲಿ ಕಬ್ಬು ಬೆಳೆಗಾರರಿಂದ ರಸ್ತೆ ತಡೆದು ಪ್ರತಿಭಟನೆ..!
ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಭರ್ಜರಿ ಗೆಲುವು..!
ಧಾರವಾಡ: ಪಶ್ಚಿಮ ಪದವೀಧರ ಚುನಾವಣೆ ಮತ ಎಣಿಕೆ, 3ನೇ ಸುತ್ತಿನಲ್ಲೂ ಬಿಜೆಪಿ ಭರ್ಜರಿ ಮುನ್ನಡೆ
ಈಶಾನ್ಯ ಶಿಕ್ಷಕರ ಕ್ಷೇತ್ರ: ಬಿಜೆಪಿಯ ಶಶೀಲ್ ನಮೋಶಿಗೆ ಭರ್ಜರಿ ಗೆಲುವು..! ಘೋಷಣೆಯಷ್ಟೇ ಬಾಕಿ..!
ಧಾರವಾಡ: ಪಶ್ಚಿಮ ಪದವೀಧರ ಕ್ಷೇತ್ರ – ಸತತ ಮುನ್ನಡೆ ಕಾಯ್ದುಕೊಂಡ ಬಿಜೆಪಿ ಅಭ್ಯರ್ಥಿ..!
ಪಶ್ಚಿಮ ಪದವೀಧರ ಕ್ಷೇತ್ರ – ಮೊದಲ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರು ಮುನ್ನಡೆ
Category: ರಹಸ್ಯ ಕಾರ್ಯಾಚರಣೆ
ಬರಗೆಟ್ಟವನ ಲಂಚದಾಸೆಗೆ ಬೀದಿಗೆ ಬಿದ್ಲಾ ಆ ವೃದ್ದೆ..? ಅಸಲು, ಆ ವೃದ್ದೆಗೆ ಆಗಿರೋ ಅನ್ಯಾಯ ಎಂಥಾದ್ದು ಗೊತ್ತಾ..?
ಮುಂಡಗೋಡ: ಪ್ರಿಯ ವೀಕ್ಷಕರೇ, ನಿನ್ನೆ ನಿಮಗೆ ಮುಂಡಗೋಡ ತಾಲೂಕಿನಲ್ಲಿ ಬಡವ್ರಿಗೆ ಹಂಚಿಕೆಯಾಗೋ ಮನೆಗಳಲ್ಲಿ ನಡೆಯುತ್ತಿರೋ ಎತ್ತುವಳಿ ಪುರಾಣದ ಬಗ್ಗೆ ಹೇಳಿದ್ವಿ. ನೊಂದ ಸಂತ್ರಸ್ಥ ಕುಟುಂಬಗಳ ಆರ್ತನಾದ ಕೇಳಿಸಿದ್ವಿ. ಇವತ್ತೂ ಕೂಡ ಅದರದ್ದೇ ಮುಂದುವರಿದ ಭಾಗವಾಗಿ ಅದೊಂದು ಮನಕಲುಕುವ ಹಕೀಕತ್ತು ತಮ್ಮ ಮುಂದೆ ಇಡ್ತಿದಿವಿ. ರೊಕ್ಕ ಗಳಿಸಲೆಂದೇ ಬಾಯ್ತೆರೆದು ಕೂತಿರೋ, ಮನುಷ್ಯತ್ವವನ್ನೇ ಮರೆತಿರೋ ಕೆಲವು ಸರ್ಕಾರಿ ಸಿಬ್ಬಂದಿಗಳು ಹೇಗೇಲ್ಲ ಅಮಾನುಷವಾಗಿ ನಡೆದುಕೊಳ್ತಾರೆ ಅನ್ನೋದನ್ನ ಇವತ್ತು ಹೇಳ್ತಿವಿ. ವೇದಿಕೆಯಷ್ಟೇ..! ಯಸ್, ನಾವೀಗ ಮುಂಡಗೋಡಿನ ತಹಶೀಲ್ದಾರ್ ಕಚೇರಿಯ ಅವನೊಬ್ಬನ...
ಮುಂಡಗೋಡ ತಾಲೂಕಿನಲ್ಲಿ ಮನೆ ಕಳೆದುಕೊಂಡ ಬಡವ್ರಿಗೆ ಲಂಚಬಾಕರದ್ದೇ ಕಾಟ, ಸಚಿವರ ಪಿಎ ಹೆಸರಲ್ಲೂ ವಸೂಲಿ..? ಹಿಂಗಾದ್ರೆ ಹೆಂಗೆ ಗುರೂ..?
ಮುಂಡಗೋಡ: ತಾಲೂಕಿನಲ್ಲಿ ಮಹಾಮಳೆ ಅನ್ನೋದು ಅದೇಷ್ಟೋ ಬಡವರನ್ನು ಬೀದಿಗೆ ತಂದಿದೆ. ಗ್ರಾಮೀಣ ಭಾಗದಲ್ಲಿ ಮಹಾಮಳೆಯಿಂದ ಅದೇಷ್ಟೋ ಬಡಕುಟುಂಬಗಳು ಸೂರು ಕಳೆದುಕೊಂಡು ಅಕ್ಷರಶಃ ನಲುಗಿ ಹೋಗಿವೆ. ಹೀಗಿದ್ದಾಗ, ಸರ್ಕಾರ ಅಂತಹ ಕುಟುಂಬಗಳಿಗೆ ಆಸರೆಯಾಗಲು, ಪರಿಹಾರದ ರೂಪದಲ್ಲಿ ಮನೆಕಳೆದುಕೊಂಡವರಿಗೆ ಮನೆ ಕಟ್ಟಿಸಿಕೊಳ್ಳಲು ನೆರವು ನೀಡ್ತಿದೆ. ಸಂಪೂರ್ಣವಾಗಿ ಮನೆ ಕಳೆದುಕೊಂಡ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಹಣ ಕಂತುಗಳ ಮೂಲಕ ಬಿಡುಗಡೆ ಮಾಡ್ತಿದೆ. ಆದ್ರೆ, ಹೀಗೆ ಬರುವ ಹಣದಲ್ಲಿ ಕೆಲವು ಬ್ರಷ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪರಿಹಾರದ...
ಅಗಡಿ ಶಾಲೆಯಲ್ಲಿ ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡಿದ್ರಾ ಅಧಿಕಾರಿಗಳು..?
ಮುಂಡಗೋಡ: ತಾಲೂಕಿನ ಅಗಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಸಚಿವ ಶಿವರಾಮ್ ಹೆಬ್ಬಾರ್ ಬಂದಿದ್ರು.. ಆದ್ರೆ ಈ ಕಾರ್ಯಕ್ರಮದ ಸಲುವಾಗಿ ಬರೋಬ್ಬರಿ 24 ವಿದ್ಯಾರ್ಥಿಗಳ ಜೀವ ಒತ್ತೆ ಇಡಲಾಗಿತ್ತಾ ಅನ್ನೊ ಆತಂಕ ಇತ್ತು. ಯಾಕಂದ್ರೆ ಆ ವಿದ್ಯಾರ್ಥಿಗಳ ಕಾಲಡಿಯೇ ಯಮರೂಪಿ ವಿದ್ಯುತ್ ತಂತಿ ಹಾದು ಹೋಗಿತ್ತು. ಇಲಾಖಾ ಅಧಿಕಾರಿಗಳ ಎದುರೇ..! ಅಸಲು, ಹಾಗೆ ವಿದ್ಯುತ್ ತಂತಿ ಹಾದು ಹೋಗಿತ್ತು ಅನ್ನೊದಕ್ಕಿಂತ ಆ ಕಾರ್ಯಕ್ರಮದ ಆಯೋಜಕರೇ ಹಾಗೆ ಬೇಜಾವಾಬ್ದಾರಿ ತೋರಿಸಿದ್ರು. ಇದು ಖುದ್ದು ಆ...
ವಡಗಟ್ಟಾ ಚೆಕ್ ಪೊಸ್ಟ್ ನಲ್ಲಿ ಎತ್ತುವಳಿ ದಂಧೆ..? ಅರಣ್ಯ ಸಿಬ್ಬಂದಿಗಳೇ ಇಲ್ಲಿ ದಂಧೆಗೆ ಇಳಿದು ಬಿಟ್ರಾ..?
ಮುಂಡಗೋಡ: ತಾಲೂಕಿನ ಗಡಿಭಾಗದ ವಡಗಟ್ಟಾ ಚೆಕ್ ಪೊಸ್ಟ್ ಅಂದ್ರೆ ಅರಣ್ಯ ಉತ್ಪನ್ನ ತನಿಖಾ ಠಾಣೆ ಅನ್ನೋದು ನಾಮಕೆವಾಸ್ತೆ ಅನ್ನುವಂತಾಗಿದೆ. ಉತ್ತರ ಕನ್ನಡದ ಅದ್ರಲ್ಲೂ ಮುಂಡಗೋಡ ತಾಲೂಕಿನ ಅಮೂಲ್ಯ ಅರಣ್ಯ ಸಂಪತ್ತಿನ ರಕ್ಷಣೆಗಾಗಿ ಪ್ರತಿಷ್ಟಾಪಿಸಲ್ಪಟ್ಟಿರೋ ವಡಗಟ್ಟಾ ಅರಣ್ಯ ಉತ್ಪನ್ನಗಳ ತನಿಖಾ ಠಾಣೆ ಚೆಕ್ ಪೊಸ್ಟ್ ನಲ್ಲಿ ಕೆಲವು ಅರಣ್ಯ ಇಲಾಖೆ ಸಿಬ್ಬಂದಿಗಳೇ ಎತ್ತುವಳಿಗೆ ನಿಂತಿದ್ದಾರಾ..? ಈ ದೃಷ್ಯ ನೋಡಿದ್ರೆ ಹಾಗೆ ಅನ್ನಿಸತ್ತೆ. ದೃಷ್ಯ ನಂಬರ್ 1. ದಂಧೆ ಮಾಡಿಕೊಂಡ್ರಾ..? ಇದು ವಡಗಟ್ಟಾ ಅರಣ್ಯ ಚೆಕ್ಪೋಸ್ಟ್ ನಲ್ಲಿ ನಿತ್ಯವೂ ನಡೆಯುವ...
ಇದು ಲೊಯೊಲಾ ಕೇಂದ್ರೀಯ ವಿದ್ಯಾಲಯದ ಬೇಜವಾಬ್ದಾರಿ..! ಅಷ್ಟಕ್ಕೂ ಇವ್ರಿಗೆ ಸರ್ಕಾರದ ನಿಯಮ ಅನ್ವಯಿಸೋದೇ ಇಲ್ವಾ..?
ಇಡೀ ರಾಜ್ಯ ಕೊರೋನಾ ಮೂರನೇ ಅಲೆಯ ಭೀತಿಯಲ್ಲಿದೆ. ಅದ್ರಲ್ಲೂ ಈ ಮೂರನೇ ಅಲೆ ಅನ್ನೋದು ಬಹುತೇಕ ಮಕ್ಕಳಿಗೆ ತುಂಬಾ ಎಫೆಕ್ಟ್ ಆಗತ್ತೆ ಅನ್ನೋ ಮಾತುಗಳನ್ನು ತಜ್ಞರು ಎಚ್ಚರಿಸಿದ್ದಾರೆ. ಈ ಕಾರಣಕ್ಕಾಗೇ ಸರ್ಕಾರ ಮಕ್ಕಳ ಆರೋಗ್ಯದ ಸಲುವಾಗಿ ಇನ್ನಿಲ್ಲದ ಕಟ್ಟೇಚ್ಚರ ವಹಿಸಿದೆ. ಸಾಂಕ್ರಾಮಿಕ ಜ್ವರದ ಬಾಧೆ..! ಅಂದಹಾಗೆ, ಸದ್ಯ ಇಡೀ ರಾಜ್ಯಾದ್ಯಂತ ಪುಟ್ಟ ಪುಟ್ಟ ಮಕ್ಕಳಿಗೆ ಸಾಂಕ್ರಾಮಿಕ ಜ್ವರದ ಬಾಧೆ ಎದುರಾಗಿದೆ. ಕೆಲವು ಜಿಲ್ಲೆಗಳಲ್ಲಿ ಮಕ್ಕಳಿಗೆ ಜ್ವರ, ನೆಗಡಿ, ಕೆಮ್ಮು ಕಫ ಸೇರಿ ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿವೆ. ಮುಂಡಗೋಡ...





