Home ಅಪರಾಧ ಜಗತ್ತು

Category: ಅಪರಾಧ ಜಗತ್ತು

Post
ಮುಂಡಗೋಡಿನ ಜ್ಯುವೆಲ್ಲರಿಯಲ್ಲಿ ಕಾಲುಚೈನು ದೋಚಿದ್ದ ಇಬ್ಬರು ಖತರ್ನಾಕ “ಶಾಂತಾ” ಬಾಯಿಗಳ ಬಂಧನ..!

ಮುಂಡಗೋಡಿನ ಜ್ಯುವೆಲ್ಲರಿಯಲ್ಲಿ ಕಾಲುಚೈನು ದೋಚಿದ್ದ ಇಬ್ಬರು ಖತರ್ನಾಕ “ಶಾಂತಾ” ಬಾಯಿಗಳ ಬಂಧನ..!

ಮುಂಡಗೋಡ ಪಟ್ಟಣದ ಬಸ್ ನಿಲ್ದಾಣದ ಎದುರಿನಲ್ಲೇ ಇರೋ ರಾಜಲಕ್ಷ್ಮಿ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ನಡೆದಿದ್ದ ಬೆಳ್ಳಿ ಆಭರಣ ಕಳವು ಪ್ರಕರಣವನ್ನು ಭೇದಿಸುವಲ್ಲಿ ಮುಂಡಗೋಡ ಪೊಲೀಸರು ಯಶಸ್ವಿಯಾಗಿದ್ದಾರೆ. ಪರಿಣಾಮ, ಇಬ್ಬರು ಅಂತರ್ ಜಿಲ್ಲಾ ಮಹಿಳಾ ಆರೋಪಿಗಳನ್ನು ಬಂಧಿಸಿ, ಅವರಿಂದ ಒಟ್ಟು 1.30 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ​ಘಟನೆ ಹೇಗಾಯ್ತು..? ​ಅಕ್ಟೋಬರ್ 17 ರಂದು ಮಟ ಮಟ ಮಧ್ಯಾಹ್ನ, ಇಬ್ಬರು ಖದೀಮರು ಅಂಗಡಿಗೆ ನುಗ್ಗಿದ್ದರು. ಅಂಗಡಿಯಲ್ಲಿದ್ದ ವ್ಯಕ್ತಿಗೆ ಗೊತ್ತಾಗದಂತೆ ಸುಮಾರು 700 ಗ್ರಾಂ ತೂಕದ, ಅಂದಾಜು 1,30,000...

Post
ಅಥಣಿಯಲ್ಲಿ ಅಕ್ರಮ ಪಿಸ್ತೂಲ್ ಮಾರಾಟ ಜಾಲ ಪತ್ತೆ; ಇಬ್ಬರ ಬಂಧನ

ಅಥಣಿಯಲ್ಲಿ ಅಕ್ರಮ ಪಿಸ್ತೂಲ್ ಮಾರಾಟ ಜಾಲ ಪತ್ತೆ; ಇಬ್ಬರ ಬಂಧನ

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಅಕ್ರಮ ಶಸ್ತ್ರಾಸ್ತ್ರ ಮಾರಾಟ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಹಾಗೂ ಎರಡು ಜೀವಂತ ಗುಂಡುಗಳನ್ನು ಹೊಂದಿದ್ದ ಇಬ್ಬರು ಆರೋಪಿಗಳನ್ನು ಅಥಣಿ ಪೊಲೀಸರು ಬಂಧಿಸಿದ್ದು, ಅವರಿಂದ ಪಿಸ್ತೂಲ್ ಮತ್ತು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಅಕ್ಟೋಬರ್ 30ರಂದು ಅಥಣಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಎಲ್.ಬಿ. ಅಗ್ನಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ವಿದ್ಯಾನಗರ ನಿವಾಸಿ, ಸದ್ಯ ಪಾರ್ಥನಹಳ್ಳಿಯಲ್ಲಿ ವಾಸವಿರುವ 25 ವರ್ಷದ ಆಸೀಫ್ ಅಷ್ಟಾಕಹುಸೇನ್ ದೇಸಾಯಿ ಎಂಬಾತ ಗುಂಡೇವಾಡಿ...

Post
ಬೈಕ್ ಕಳ್ಳತನ ಪ್ರಕರಣ ಭೇದಿಸಿದ ಹಳಿಯಾಳ ಪೊಲೀಸರು, ಇಬ್ಬರು ಆರೋಪಿಗಳ ಬಂಧನ..!

ಬೈಕ್ ಕಳ್ಳತನ ಪ್ರಕರಣ ಭೇದಿಸಿದ ಹಳಿಯಾಳ ಪೊಲೀಸರು, ಇಬ್ಬರು ಆರೋಪಿಗಳ ಬಂಧನ..!

ಹಳಿಯಾಳ: ಬೈಕ್ ಕಳ್ಳತನ ಪ್ರಕರಣವೊಂದನ್ನು ಭೇದಿಸುವಲ್ಲಿ ಹಳಿಯಾಳ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ, ಕಳ್ಳತನವಾಗಿದ್ದ ಸುಮಾರು 50 ಸಾವಿರ ರೂ. ಮೌಲ್ಯದ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ. ಸೆ.29ರಂದು ರಾತ್ರಿ 11 ಗಂಟೆಯಿಂದ ಸೆ.30ರ ಬೆಳಗಿನ ಜಾವ 5.30ರ ನಡುವಿನ ಅವಧಿಯಲ್ಲಿ ದೂರುದಾರರ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್‌ನ್ನು ಕಳ್ಳತನ ಮಾಡಲಾಗಿತ್ತು. ಈ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಪ್ರಕರಣದ ತನಿಖೆ...

Post
ಹಳಿಯಾಳದಲ್ಲಿ ಖಾಸಗಿ ವೈದ್ಯನ ₹1 ಲಕ್ಷ ಕಳ್ಳತನ ಕೇಸ್ ಬೇಧಿಸಿದ ಪೊಲೀಸ್ರು: ಖತರ್ನಾಕ ಕಳ್ಳ ಅಂದರ್..!

ಹಳಿಯಾಳದಲ್ಲಿ ಖಾಸಗಿ ವೈದ್ಯನ ₹1 ಲಕ್ಷ ಕಳ್ಳತನ ಕೇಸ್ ಬೇಧಿಸಿದ ಪೊಲೀಸ್ರು: ಖತರ್ನಾಕ ಕಳ್ಳ ಅಂದರ್..!

ಹಳಿಯಾಳದಲ್ಲಿ ವ್ಯಕ್ತಿಯೊಬ್ಬರಿಂದ ₹1 ಲಕ್ಷ ನಗದು ಕಳ್ಳತನ ಮಾಡಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿ, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ₹91,700 ನಗದು ಹಾಗೂ ಸುಮಾರು ₹50,000 ಮೌಲ್ಯದ ಹೋಂಡಾ ಶೈನ್ ಬೈಕ್ ವಶಪಡಿಸಿಕೊಳ್ಳಲಾಗಿದೆ. ಅಕ್ಟೋಬರ್ 19, 2026ರಂದು ಬ್ಯಾಂಕ್ ಸಮೀಪ ಕಳ್ಳತನ ನಡೆದಿದ್ದು, ಈ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಕ್ಟೋಬರ್ 26ರಂದು ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ,...

Post
ಮುಂಡಗೋಡ ಆಲಳ್ಳಿಯಲ್ಲಿ ಬೆಚ್ಚಿಬೀಳಿಸಿದ ಭೀಕರ ಹತ್ಯೆ..! ಒಂಟಿ ವೃದ್ಧೆಯ ಕೊಲೆ ಮಾಡಿ ಹಣ, ಚಿನ್ನ ದೋಚಿದ್ರಾ ದುಷ್ಕರ್ಮಿಗಳು..? ಅಷ್ಟಕ್ಕೂ ಶವ ಬೆತ್ತಲೆ ಯಾಕಾಯ್ತು..?

ಮುಂಡಗೋಡ ಆಲಳ್ಳಿಯಲ್ಲಿ ಬೆಚ್ಚಿಬೀಳಿಸಿದ ಭೀಕರ ಹತ್ಯೆ..! ಒಂಟಿ ವೃದ್ಧೆಯ ಕೊಲೆ ಮಾಡಿ ಹಣ, ಚಿನ್ನ ದೋಚಿದ್ರಾ ದುಷ್ಕರ್ಮಿಗಳು..? ಅಷ್ಟಕ್ಕೂ ಶವ ಬೆತ್ತಲೆ ಯಾಕಾಯ್ತು..?

ಮುಂಡಗೋಡ ತಾಲೂಕಿನಲ್ಲಿ ಮತ್ತೊಂದು ಭೀಕರ ಕೃತ್ಯ ನಡೆದಿದೆ. ಥೇಟು ಮಳಗಿ ಕಾಡಲ್ಲಿ ಕೆಲವೇ ತಿಂಗಳುಗಳ ಹಿಂದೆ ನಡೆದಿದ್ದ, ವೃದ್ದೆಯ ಭಯಾನಕ ಹತ್ಯೆಯ ಕೇಸನ್ನು ನೆನಪಿಸುವಂತಹ ಮತ್ತೊಂದು ಘಟನೆ ನಡೆದಿದೆ. ವೃದ್ಧೆಯನ್ನು ಬೆತ್ತಲೆಗೊಳಿಸಿ ಹತ್ಯೆ ಮಾಡಿ ಹೋಗಿದ್ದಾರೆ ಹಂತಕರು‌. ಅಂದಹಾಗೆ ಇದು ನಡೆದಿದ್ದು, ಕಾತೂರು ಸಮೀಪದ ಆಲಳ್ಳಿ ಗ್ರಾಮದಲ್ಲಿ.. ಹೌದು, ಮುಂಡಗೋಡ ತಾಲೂಕಿನ ಕಾತೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಳ್ಳಿ ಗ್ರಾಮದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 75 ವರ್ಷದ ವೃದ್ಧೆಯನ್ನು ಹತ್ಯೆ ಮಾಡಿರೋ ದುಷ್ಕರ್ಮಿಗಳು, ಚಿನ್ನಾಭರಣ ಹಾಗೂ ನಗದು ಹಣ...

Post
ಮುಂಡಗೋಡದಲ್ಲಿ ಮೊಬೈಲ್ ಅಂಗಡಿಗೆ ಕನ್ನ..! ಶಟರ್ ಮುರಿದು ₹63 ಸಾವಿರ ಮೌಲ್ಯದ ಮೊಬೈಲ್, ವಸ್ತುಗಳ ಕಳವು..!

ಮುಂಡಗೋಡದಲ್ಲಿ ಮೊಬೈಲ್ ಅಂಗಡಿಗೆ ಕನ್ನ..! ಶಟರ್ ಮುರಿದು ₹63 ಸಾವಿರ ಮೌಲ್ಯದ ಮೊಬೈಲ್, ವಸ್ತುಗಳ ಕಳವು..!

ಮುಂಡಗೋಡ ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಶಿವು ಮೊಬೈಲ್ ಅಂಗಡಿಗೆ ಕಳ್ಳರು ನುಗ್ಗಿ ₹63,920 ಮೌಲ್ಯದ ಮೊಬೈಲ್ ಪರಿಕರಗಳು ಹಾಗೂ ಹಳೆಯ ಮೊಬೈಲ್‌ಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ. FIRನಲ್ಲಿ ದಾಖಲಾಗಿರುವ ಮಾಹಿತಿಯಂತೆ, ಶಿರಸಿ ರಸ್ತೆಯಲ್ಲಿಯಲ್ಲಿರೋ ಲಕ್ಷ್ಮಣ ಶಿವಪ್ಪ ಲಮಾಣಿ ಎಂಬುವವರಿಗೆ ಸೇರಿದ, ಮೊಬೈಲ್ ಅಂಗಡಿಯಲ್ಲಿ ಕಳ್ಳರು ಅಂಗಡಿಯ ಶಟರ್‌ಗೆ ಯಾವುದೋ ಗಟ್ಟಿಯಾದ ವಸ್ತುವಿನಿಂದ ಹೊಡೆದು ಮುರಿದು ಒಳನುಗ್ಗಿದ್ದಾರೆ ಎನ್ನಲಾಗಿದೆ. ಅಂಗಡಿಯಲ್ಲಿದ್ದ ಹೆಡ್‌ಫೋನ್‌ಗಳು, ಕೀಪ್ಯಾಡ್ ಮೊಬೈಲ್, ಡೆಮೋ ಸಿಮ್‌ಗಳು, ಮೆಮೊರಿ ಕಾರ್ಡ್‌ಗಳು, ಪೆನ್‌ಡ್ರೈವ್‌ಗಳು, ವಿವೋ ಚಾರ್ಜರ್, ಕಾರ್ಡ್ ರೀಡರ್‌ಗಳು,...

Post
ಮುಂಡಗೋಡ ಪೊಲೀಸರ ದಾಳಿ; ದೇವಸ್ಥಾನದ ಮುಂಭಾಗದಲ್ಲೇ ಇಸ್ಪೀಟ್ ಆಡುತ್ತಿದ್ದ ಐವರ ವಿರುದ್ಧ ಕೇಸು..!

ಮುಂಡಗೋಡ ಪೊಲೀಸರ ದಾಳಿ; ದೇವಸ್ಥಾನದ ಮುಂಭಾಗದಲ್ಲೇ ಇಸ್ಪೀಟ್ ಆಡುತ್ತಿದ್ದ ಐವರ ವಿರುದ್ಧ ಕೇಸು..!

ಮುಂಡಗೋಡ: ದೇವಸ್ಥಾನದ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕಿಟ್ಟು ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಐವರ ವಿರುದ್ಧ ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಜೂಜಾಟಕ್ಕೆ ಬಳಸಿದ್ದ ₹6,700 ನಗದು ಹಾಗೂ 52 ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಪ್ರಕಾರ, ಆ.27ರಂದು ಬೆಳಗಿನ ಜಾವ ಸುಮಾರು 3.10 ಗಂಟೆಗೆ ಕಾಳಗಿನಕೊಪ್ಪ ಗಣಪತಿ ದೇವಸ್ಥಾನದ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಐವರು ಹಣವನ್ನು ಪಣಕ್ಕಿಟ್ಟು ಇಸ್ಪೀಟ್ ಆಟ ಆಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಮಾಹಿತಿ...

Post
NMD ಜಮೀರ್ ಬರ್ಬರ ಹತ್ಯೆ ಕೇಸ್..! ಮತ್ತೋರ್ವ ಪ್ರಮುಖ ಆರೋಪಿ ಅರೆಸ್ಟ್..! ಕಾಜಗಾರ ಮಂಜುಗೆ ಕಂಟ್ರಿಮೇಡ್ ಪಿಸ್ತೂಲ್  ಸಪ್ಲೈ ಮಾಡಿದ್ದವ ಅಂದರ್..!

NMD ಜಮೀರ್ ಬರ್ಬರ ಹತ್ಯೆ ಕೇಸ್..! ಮತ್ತೋರ್ವ ಪ್ರಮುಖ ಆರೋಪಿ ಅರೆಸ್ಟ್..! ಕಾಜಗಾರ ಮಂಜುಗೆ ಕಂಟ್ರಿಮೇಡ್ ಪಿಸ್ತೂಲ್ ಸಪ್ಲೈ ಮಾಡಿದ್ದವ ಅಂದರ್..!

ಮುಂಡಗೋಡಿನ NMD ಜಮೀರ್ ಭೀಕರ ಹತ್ಯೆ ಕೇಸಲ್ಲಿ ಮತ್ತೋರ್ವ ಆರೋಪಿಯನ್ನು ಪೊಲೀಸ್ರು ಬಂಧಿಸಿದ್ದಾರೆ‌. ಆ ಬರ್ಬರ ಹತ್ಯೆಯಲ್ಲಿ ಬಳಸಲಾಗಿದ್ದ ಎರಡು ಕಂಟ್ರಿ ಮೇಡ್ ಪಿಸ್ತೂಲು ಪೂರೈಸಿದ್ದವ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾನೆ. ಆರೋಪಿಯನ್ನು ಉತ್ತರ ಪ್ರದೇಶ ಗೋರಖಪುರ‌ದಿಂದ ಬಂಧಿಸಿ ಕರೆತಂದಿದ್ದಾರೆ ಪೊಲೀಸ್ರು. ಅಂದಹಾಗೆ, ಸದ್ಯ NMD ಹತ್ಯೆ ಕೇಸಲ್ಲಿ ಅರೆಸ್ಟ್ ಆಗಿರೋ ಆರೋಪಿಗಳ ಸಂಖ್ಯೆ 12 ಕ್ಕೆ ಏರಿದೆ. ಅದು ಏಪ್ರಿಲ್ 24 ರ ಮಿಡ್ ನೈಟ್..! ಯಸ್, ಅವತ್ತು ಶುಕ್ರವಾರ ಏಪ್ರಿಲ್ 24 ರ ರಾತ್ರಿ...

Post
ಕಳ್ಳತನಕ್ಕೆ ಕಡಿವಾಣ ಹಾಕಲು ಮುಂಡಗೋಡ ಖಾಕಿ ಆಕ್ಷನ್..! ಖುದ್ದು ಇನ್ಸ್‌ಪೆಕ್ಟರ್ ರಮೇಶ್ ಹನಾಪುರ ನೇತೃತ್ವದಲ್ಲಿ ನೈಟ್ ಪೆಟ್ರೋಲಿಂಗ್..!

ಕಳ್ಳತನಕ್ಕೆ ಕಡಿವಾಣ ಹಾಕಲು ಮುಂಡಗೋಡ ಖಾಕಿ ಆಕ್ಷನ್..! ಖುದ್ದು ಇನ್ಸ್‌ಪೆಕ್ಟರ್ ರಮೇಶ್ ಹನಾಪುರ ನೇತೃತ್ವದಲ್ಲಿ ನೈಟ್ ಪೆಟ್ರೋಲಿಂಗ್..!

ಮುಂಡಗೋಡ ತಾಲೂಕಿನಲ್ಲಿ ಸರಣಿ ಕಳ್ಳತನ ಪ್ರಕರಣಗಳ ಆತಂಕದ ನಡುವೆ ಮುಂಡಗೋಡ ಪೊಲೀಸ್ರು ಮತ್ತಷ್ಟು ಅಲರ್ಟ್ ಆಗಿದ್ದಾರೆ. ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಇದೀಗ ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿ ಗಸ್ತು ಹಾಗೂ ತಪಾಸಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಇಲ್ಲಿನ ಪಿಐ ರಮೇಶ ಹನಾಪುರ ನೇರವಾಗಿ ಫಿಲ್ಡಿಗೆ ಇಳಿದು ಜನರೊಟ್ಟಿಗೆ ಬೆರೆತಿದ್ದಾರೆ. ಜನರ ನೋವಿಗೆ ಸ್ಪಂಧಿಸಿದ್ದಾರೆ. ನಿಮ್ಮೊಂದಿಗೆ ನಾನಿದ್ದಿನಿ, ಭಯ ಬೇಡ ಅನ್ನೋ “ಅಭಯ” ನೀಡಿದ್ದಾರೆ. ಯಸ್, ಮುಂಡಗೋಡ ತಾಲೂಕಿನ ಕೋಡಂಬಿ, ಓಣಿಕೇರಿ ಹಾಗೂ ಚೌಡಳ್ಳಿ ಗ್ರಾಮಗಳಲ್ಲಿ ಖುದ್ದು ಪೊಲೀಸ್...

Post
ಮುಂಡಗೋಡಕ್ಕೆ ಕಳ್ಳರ ಎಂಟ್ರಿಗೆ ಬ್ರೇಕ್..! ಸರಣಿ ಕಳ್ಳತನ ಕಂಡು ರೊಚ್ಚಿಗೆದ್ದ ಖಾಕಿ; ತಾಲೂಕಿಗೆ ಅಷ್ಟ ದಿಗ್ಬಂಧನ, ನಾಲ್ಕೂ ದಿಕ್ಕುಗಳಲ್ಲಿ ನಾಕಾಬಂದಿ..! ಸಾರ್ವಜನಿಕರೂ ಸಾಥ್..!

ಮುಂಡಗೋಡಕ್ಕೆ ಕಳ್ಳರ ಎಂಟ್ರಿಗೆ ಬ್ರೇಕ್..! ಸರಣಿ ಕಳ್ಳತನ ಕಂಡು ರೊಚ್ಚಿಗೆದ್ದ ಖಾಕಿ; ತಾಲೂಕಿಗೆ ಅಷ್ಟ ದಿಗ್ಬಂಧನ, ನಾಲ್ಕೂ ದಿಕ್ಕುಗಳಲ್ಲಿ ನಾಕಾಬಂದಿ..! ಸಾರ್ವಜನಿಕರೂ ಸಾಥ್..!

ಮುಂಡಗೋಡ ತಾಲೂಕಿನಲ್ಲಿ ಒಂದರ ಹಿಂದೆ ಒಂದರಂತೆ ನಡೆಯುತ್ತಿರೋ ಕಳ್ಳತನ ಪ್ರಕರಣಗಳಿಂದ ಮುಂಡಗೋಡ ತಾಲೂಕಿನ ಜನರಲ್ಲಿ ಆತಂಕ ಮನೆಮಾಡಿದೆ. ಮನೆ, ಅಂಗಡಿ, ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡುತ್ತಿರುವ ಖದೀಮರಿಗೆ ಇದೀಗ ಮುಂಡಗೋಡ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.“ಖದೀಮರು ಇನ್ಮುಂದೆ ಮುಂಡಗೋಡದ ಗಡಿಗೆ ಕಾಲಿಡಬೇಕಾದ್ರೂ ಯೋಚಿಸ್ಬೇಕು..!” ಅನ್ನೋ ರೀತಿಯಲ್ಲಿ ಪೊಲೀಸ್ರು ಅಲರ್ಟ್ ಆಗಿದ್ದು, ತಾಲೂಕಿನಾದ್ಯಂತ ಭದ್ರತೆ ಬಿಗಿಗೊಳಿಸಿದ್ದಾರೆ. ಸರಣಿ ಕಳ್ಳತನ ಪ್ರಕರಣಗಳ ಬೆನ್ನಲ್ಲೇ ಮುಂಡಗೋಡ ಪೊಲೀಸರ “ಆಪರೇಷನ್ ಖಾಕಿ” ಕಣ್ಗಾವಲು ಶುರುವಾಗಿದೆ. ಪಟ್ಟಣ ಮಾತ್ರವಲ್ಲ, ತಾಲೂಕಿನ ಗ್ರಾಮೀಣ ಭಾಗಗಳಲ್ಲೂ ರಾತ್ರಿ ಗಸ್ತು...