ಭಟ್ಕಳ ತಾಲೂಕಿನ ಅಳ್ವೇಕೋಡಿ ಸಮುದ್ರ ತೀರದಲ್ಲಿ ಭಾನುವಾರ ಭೀಕರ ದುರಂತ ಸಂಭವಿಸಿದ್ದು, ಒಂದೇ ಕುಟುಂಬದ ಎಂಟು ಮಂದಿ ಅಲೆಗಳ ಅಬ್ಬರಕ್ಕೆ ಕೊಚ್ಚಿಹೋಗಿ ಶೌಅಗಿದ್ದಾರೆ. ಜೊತೆಗೆ ಮೂವರು ನಾಪತ್ತೆಯಾಗಿದ್ದಾರೆ. ರಜಾದಿನದ ಹಿನ್ನೆಲೆಯಲ್ಲಿ ಒಟ್ಟು 13 ಮಂದಿ ಸೇರಿ ಸಮುದ್ರ ತೀರಕ್ಕೆ ತೆರಳಿದ್ದರು. ಈ ವೇಳೆ ಕೆಲವರು ಚಿಪ್ಪು ಸಂಗ್ರಹಿಸಲು ಸಮುದ್ರಕ್ಕೆ ಇಳಿದಾಗ, ಅಕಸ್ಮಾತ್ ಏರಿದ ದೈತ್ಯ ಅಲೆಗಳ ಸೆಳೆತಕ್ಕೆ ಸಿಲುಕಿ ಹಲವರು ನೀರಿನಲ್ಲಿ ಕಾಣೆಯಾಗಿದ್ದಾರೆ. ಈ ಅವಘಡದಲ್ಲಿ ಮೃತಪಟ್ಟ ಎಂಟು ಮಂದಿಯೂ ಒಂದೇ ಕುಟುಂಬಕ್ಕೆ ಸೇರಿದವರು ಎಂದು ತಿಳಿದುಬಂದಿದೆ....
Top Stories
ಮುಂಡಗೋಡ ಪೊಲೀಸ್ರ ಕಾರ್ಯಾಚರಣೆ, ಬ್ಲೂಹಿಲ್ ಹೊಟೇಲ್ ಬಳಿ ಗಾಂಜಾ ದಂಧೆ ಮಾಡುತ್ತಿದ್ದ ವ್ಯಕ್ತಿಯ ಬಂಧನ..!
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ..!
ಅಳ್ವೇಕೋಡಿ ಕಡಲ ತೀರದಲ್ಲಿ ಭೀಕರ ದುರಂತ: ಚಿಪ್ಪೆಕಲ್ಲು ತರಲು ಹೋಗಿದ್ದ ಒಂದೇ ಕುಟುಂಬದ 8 ಮಂದಿ ಬಲಿ, ಮೂವರು ನಾಪತ್ತೆ
ವಡಗಟ್ಟಾ ಗಾವಠಾಣ ಒತ್ತುವರಿ ತೆರವು ಕಾರ್ಯ ಶುರು..! ಬೇಕಾಬಿಟ್ಟಿ ಜಾಗ ಒತ್ತುವರಿ ಮಾಡಿಕೊಂಡಿದ್ದವರಿಗೆ ಶಾಕ್
ಪಿಐ ರಂಗನಾಥ್ ನೀಲಮ್ಮನವರ್ ಟ್ರಾನ್ಸಫರ್, ರಮೇಶ್ ಹನಾಪುರ ಮುಂಡಗೋಡಿನ ನೂತನ ಪಿಐ..!
ಹುನಗುಂದದಲ್ಲಿ ಮಳೆಗಾಳಿಗೆ ಹಾರಿಹೋದ ಮನೆಯ ಮೇಲ್ಚಾವಣಿಗಳು..! ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು..!
ಧರ್ಮಾ ಜಲಾಶಯದ ಕಾಲುವೆಯಲ್ಲಿ ಇಬ್ಬರು ಸಹೋದರ ಬಾಲಕರು ನೀರುಪಾಲು..! ರಜೆಗೆ ಬಂದಿದ್ದವರು ಹೆಣವಾದರು..!
NMD ಹತ್ಯೆ ಕೇಸ್| ಯುಪಿಗೆ ಹೋಗಿ ಪಿಸ್ತೂಲ್ ತಂದಿದ್ದ ಆರೋಪಿಗಳ ಮನೆಗಳ ಮೇಲೆ ಪೊಲೀಸ್ರ ದಾಳಿ..! 7 ತಂಡಗಳಲ್ಲಿ ಪೊಲೀಸ್ರ ಖಡಕ್ ಸರ್ಚಿಂಗ್..!
NMD ಜಮೀರ್ ಹತ್ಯೆ ಕೇಸ್, ಮತ್ತೆ ನಾಲ್ವರು ಆರೋಪಿಗಳು ಅಂದರ್..! 11 ಕ್ಕೆ ಏರಿದ ಆರೋಪಿಗಳ ಸಂಖ್ಯೆ..!
ಮುಂಡಗೋಡಿನ ಯರೈಬೈಲ್ DyRFO, ಉಗ್ನಿಕೇರಿ ಬೀಟ್ ಫಾರೇಸ್ಟ್ ಗಾರ್ಡ್ ವಿರುದ್ಧ ಲೋಕಾಯುಕ್ತ ಕೇಸ್, FIR ದಾಖಲು..! ಅನ್ನದಾತನ ಹತ್ರ ಲಂಚ ಕೇಳಿದ್ನಾ ಆ ಅರಣ್ಯ ಅಧಿಕಾರಿ..?
ಟಿಬೇಟಿಗ ಲಾಮಾನ ಹತ್ಯೆ ಕೇಸ್, ಮೂವರು ಆರೋಪಿಗಳು ಅಂದರ್..! ಕಬ್ಬು ಕಟಾವ್ ಮಾಡೋ ಗ್ಯಾಂಗ್ ಈ ಹತ್ಯೆ ಮಾಡಿದ್ದು ಯಾಕೆ..?
ಕೇರಳಂ ಹಾಗೂ ರಾಜ್ಯದ 2 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಹಿನ್ನೆಲೆ..! ಮುಂಡಗೋಡ ಕೈ ಕಾರ್ಯಕರ್ತರ ಸಂಭ್ರಮ..!
ಪಂಚರಾಜ್ಯ ಚುನಾವಣೆ; 3 ರಾಜ್ಯಗಳಲ್ಲಿ ಬಿಜೆಪಿ ಗೆಲುವು, ಮುಂಡಗೋಡಿನಲ್ಲಿ ಸಂಭ್ರಮಾಚರಣೆ..!
ಹುನಗುಂದದ ಮಹಿಳೆ ಹರಿಹರದಲ್ಲಿ ನಾಪತ್ತೆ, ಇವ್ರು ಕಂಡಲ್ಲಿ ಮಾಹಿತಿ ನೀಡಲು ಮನವಿ..!
ಧಾರವಾಡದಲ್ಲಿ ಮುಂಡಗೋಡ ಟಿಬೇಟಿಗ ಲಾಮಾನ ಭೀಕರ ಹತ್ಯೆ..? ಕಾಲು ಕಟ್ಟಿ ಭೀಕರವಾಗಿ ಕೊಂದು ಬೀಸಾಕಿದ್ರಾ ಹಂತಕರು..?
ಮುಂಡಗೋಡಿನಲ್ಲಿ ಸಿಲಿಂಡರಿಗಾಗಿ ಪ್ರತಿಭಟನೆ, ಬೆಳ್ಳಂ ಬೆಳಿಗ್ಗೆ HP ಗ್ಯಾಸ್ ಗೋಡೌನ ಎದುರು ಸಾರ್ವಜನಿಕರ ಆಕ್ರೋಶ..!
ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಸ್ಪಂದಿಸಿ: ಅಧಿಕಾರಿಗಳಿಗೆ ಜಿಪಂ ಸಿಇಓ ಡಾ.ದಿಲೀಷ್ ಶಶಿ
ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, NMD ಜಮೀರ್ ದರ್ಗಾವಾಲೆ ಭೀಕರ ಹತ್ಯೆ ಕೇಸ್, ಐವರು ಆರೋಪಿಗಳ ಬಂಧನ..!
ಮುಂಡಗೋಡಿನಲ್ಲಿ NMD ಜಮೀರನ ಭೀಕರ ಹತ್ಯೆ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವದ ದೃಷ್ಯಗಳಿವು
Category: ಅಪಘಾತ
ಧರ್ಮಾ ಜಲಾಶಯದ ಕಾಲುವೆಯಲ್ಲಿ ಇಬ್ಬರು ಸಹೋದರ ಬಾಲಕರು ನೀರುಪಾಲು..! ರಜೆಗೆ ಬಂದಿದ್ದವರು ಹೆಣವಾದರು..!
ಹಾನಗಲ್: ಧರ್ಮಾ ಜಲಾಶಯದ ಕಾಲುವೆಯಲ್ಲಿ ಈಜಲು ಹೋಗಿದ್ದ ಇಬ್ಬರು ಸಹೋದರ ಬಾಲಕರು ನೀರುಪಾಲಾಗಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಕಂಚಿನೆಗಳೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಸೃಜನ್ ಬ್ಯಾತನಾಳ (10), ಸಚಿನ್ ಬ್ಯಾತನಾಳ (12) ಇಬ್ಬರು ನೀರುಪಾಲಾದ ಬಾಲಕರಾಗಿದ್ದಾರೆ. ಇಬ್ಬರೂ ಸಹೋದರರು ಬೇಸಿಗೆ ರಜೆಗಾಗಿ, ಕಂಚಿನೆಗಳೂರು ಗ್ರಾಮದ ಸಂಬಂಧಿಕರ ಮನೆಗೆ ಇನಾಮ್ ನೀರಲಗಿಯಿಂದ ಬಂದಿದ್ದರು. ಹೀಗಾಗಿ, ಇಂದು ಧರ್ಮ ಕಾಲುವೆಯಲ್ಲಿ ಈಜಲು ತೆರಳಿದ್ದರು. ಈಜು ಬಾರದೆ ಧರ್ಮ ಕಾಲುವೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಆಡೂರು ಪೊಲೀಸರು ಭೇಟಿ ನೀಡಿ...
ಪಾಳಾ ಬಳಿ ಬೈಕ್ ಹಾಗೂ ಭಾರತ್ ಬೇಂಜ್ ನಡುವೆ ಭೀಕರ ಅಪಘಾತ, ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡ ತಾಲೂಕಿನ ಪಾಳಾ ಸಮೀಪದ ಖಬರಸ್ಥಾನ ಬಳಿ ಭೀಕರ ಅಪಘಾತವಾಗಿದೆ. ಬೈಕ್ ಹಾಗೂ ಭಾರತ್ ಬೆಂಜ್ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಸವಾರ ಗಂಭೀರ ಗಾಯಗೊಂಡಿದ್ದಾನೆ. ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದ ಯಲ್ಲಪ್ಪ ಕೋಡದ್ (65) ಮೃತಪಟ್ಟ ಬೈಕ್ ಸವಾರನಾಗಿದ್ದಾನೆ. ಇನ್ನು, ವಿಠ್ಠಲ್ ಎಂಬುವವನು ಗಂಭೀರ ಗಾಯಗೊಂಡವ ವ್ಯಕ್ತಿಯಾಗಿದ್ದಾನೆ. ಗಾಯಾಳುವನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಾಚಣಕಿ ಬಳಿ ಟಿಪ್ಪರ್, ಬೈಕ್ ಮುಖಾಮುಕಿ ಡಿಕ್ಕಿ, ಜೇನಮುರಿಯ ಬೈಕ್ ಸವಾರ ಸ್ಥಳದಲ್ಲೇ ಸಾವು..!
ಮುಂಡಗೋಡ ತಾಲೂಕಿನ ಬಾಚಣಕಿ ಬಳಿ ಹುಬ್ಬಳ್ಳಿ ರಸ್ತೆಯಲ್ಲಿ ಭೀಕರ ಅಫಘಾತವಾಗಿದೆ. ಟಿಪ್ಪರ್ ಹಾಗೂ ಬೈಕ್‌ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಮುಂಡಗೋಡ ತಾಲೂಕಿನ ಜೇನಮುರಿ ಗೌಳಿದಡ್ಡಿಯ ಬಾಬು(50) ಎಂಬುವವನೇ ಅಪಘಾತದಲ್ಲಿ ಸಾವು ಕಂಡಿದ್ದಾನೆ. ಈತ ತನ್ನ ಬೈಕ್ ನಲ್ಲಿ ಬರುತ್ತಿರುವಾಗ, ಟಿಪ್ಪರ್ ವಾಹನಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗಣೇಶಪುರದ ರೈತನ ಮೇಲೆ ಕರಡಿ ದಾಳಿ, ಗಂಭೀರ ಗಾಯ..!
ಮುಂಡಗೋಡ ತಾಲೂಕಿನ ಗಣೇಶಪುರದ ರೈತನ ಮೇಲೆ ಕರಡಿ ದಾಳಿ ಮಾಡಿದೆ. ಕರಡಿ ದಾಳಿಯಿಂದ ರೈತ ಗಂಭೀರ ಗಾಯಗೊಂಡಿದ್ದು ಸದ್ಯ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಾಗಿದ್ದಾನೆ. ರಹೀಮಖಾನ್ ಮುನ್ವರ್ಖಾನ್ ಪಾಳಾ(60) ಎಂಬುವವನೇ ಕರಡಿ ದಾಳಿಗೆ ತುತ್ತಾಗಿದ್ದ ರೈತನಾಗಿದ್ದಾನೆ. ಅಂದಹಾಗೆ, ಮುಂಡಗೋಡ ತಾಲೂಕಿನ ಗಣೇಶಪುರದ ವ್ಯಕ್ತಿ ಪಾಳಾ ಸಮೀಪದ ತನ್ನ ಗದ್ದೆಗೆ ಮಂಗನ ಕಾಯಲು ಹೋಗಿದ್ದಾಗ ಕರಡಿ ದಾಳಿ ಮಾಡಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಪ್ರಾಥಮಿಕ ಚಿಕಿತ್ಸೆ ಗಾಗಿ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ...
ತಡಸ ಬಳಿ ನಿಂತಿದ್ದ ಲಾರಿಗೆ ಕಾರ್ ಡಿಕ್ಕಿ, ಹಾವೇರಿಯ ನವ ದಂಪತಿ ದುರ್ಮರಣ..! 15 ದಿನದ ಹಿಂದಷ್ಟೆ ಮದುವೆಯಾಗಿದ್ದ ಜೋಡಿ ಸಾವು..!!
ಹಾವೇರಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ನವದಂಪತಿ ಸಾವನ್ನಪ್ಪಿರುವ ಮನಕಲಕುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕಡಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇಂದು ಬೆಳಗ್ಗೆ ನಡೆದಿದೆ. ಕಾರ್ತಿಕ್ ಹೂಗಾರ (34) ಮತ್ತು ಐಶ್ವರ್ಯ ಹೂಗಾರ (30) ಮೃತ ದಂಪತಿ. 15 ದಿನಗಳ ಹಿಂದೆಯಷ್ಟೇ ಇವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ದೇವರ ದರ್ಶನ ಪಡೆದು ಬರುವಾಗ ದುರಂತ ಸಂಭವಿಸಿದೆ, ಕಾರ್ತಿಕ್ ಅವರು ಪತ್ನಿ ಮತ್ತು ಸಂಬಂಧಿಕರ ಜೊತೆ ಗದಗ ಜಿಲ್ಲೆಯ ನವಲಗುಂದ ಕಾಮಣ್ಣನ ದರ್ಶನಕ್ಕೆ...
ತಡಸ ಬಳಿ ಮರಕ್ಕೆ ಡಿಕ್ಕಿ ಹೊಡೆದ ಕಾರು, ಮುಂಡಗೋಡ ತಾಲೂಕಿನ ಇಂದೂರಿನ ಚಾಲಕನಿಗೆ ಗಂಭೀರ ಗಾಯ..!
ಮುಂಡಗೋಡ ಟಿಬೇಟಿಯನ್ ಕಾಲೋನಿಯಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಕಾರ್, ತಡಸ ಬಳಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕನಿಗೆ ಗಂಭೀರ ಗಾಯವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಮುಂಡಗೋಡ ತಾಲೂಕಿನ ಇಂದೂರು ಗ್ರಾಮದ ಅನಿಲ್ ವಡ್ಡರ್ ಎಂಬುವವನೇ ಗಾಯಗೊಂಡಿರೋ ಚಾಲಕ ಅಂತಾ ತಿಳಿದು ಬಂದಿದೆ. ಬೈಕ್ ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಗಾಯಗೊಂಡ ಚಾಲಕನ ಕಾಲಿಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಿಲಾಗಿದೆ.
ಸನವಳ್ಳಿ ಜಲಾಶಯದಲ್ಲಿ ಈಜಲು ತೆರಳಿದ್ದ ಬಾಲಕ ನೀರುಪಾಲು..! ಸ್ನೇಹಿತರೊಂದಿಗೆ ಈಜಲು ತೆರಳಿದ್ದವ ಹೆಣವಾಗಿಬಿಟ್ಟ..!!
ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕ ನೀರು ಪಾಲಾಗಿರೋ ಘಟನೆ ಮುಂಡಗೋಡ ತಾಲೂಕಿನ ಸನವಳ್ಳಿ ಜಲಾಶಯದಲ್ಲಿ ನಡೆದಿದೆ. ಮೃತ ಬಾಲಕನನ್ನು ಅಜಯ್ ರಮೇಶ ಕೆರಿಹೊಂಡದವರ್ (17) ಅಂತ ಗುರುತಿಸಲಾಗಿದೆ. ಈಜಲು ತೆರಳಿದ್ದವರು..! ಅಸಲು, ನಿನ್ನೆ ರವಿವಾರ ಸಂಜೆ ನಾಲ್ಕು ಗಂಟೆಯ ಹೊತ್ತಿಗೆ, ಸನವಳ್ಳಿ ಗ್ರಾಮದ ಆರು ಜನ ಸ್ನೇಹಿತರು ಸನವಳ್ಳಿ ಜಲಾಶಯಕ್ಕೆ ಈಜಲು ತೆರಳಿದ್ದರು. ಬಾಲಕರಾದ ನಾಗರಾಜ ಯಲ್ಲಪ್ಪ ಕೆರೆಹೊಲದವರ, ಚೇತನ ರವಿ ಆದಿಕರ್ನಾಟಕ, ತರುಣ ದೇವೆಂದ್ರ ನಾಗೋಜಿ, ನೀತಿನ ಲಾಲಬಹೂದ್ದೂರ ಶಾಸ್ತ್ರಿ ಕಳಸಗೇರಿ, ಪುನೀತ ಜಗದೀಶ್ ಕ್ಯಾಮನಕೇರಿ...
ತಡಸ ತಾಯವ್ವನ ದೇವಸ್ಥಾನದ ಬಳಿ ಸ್ವಿಪ್ಟ್ ಕಾರಿಗೆ ಬೊಲೆರೋ ವಾಹನ ಡಿಕ್ಕಿ..!
ಸ್ವಿಪ್ಟ್ ಕಾರ್ ಹಾಗೂ ಬೊಲೆರೋ ಪಿಕ್ ಅಪ್ ವಾಹನದ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಹಲವರು ಗಾಯಗೊಂಡ ಘಟನೆ ಮುಂಡಗೋಡ ತಾಲೂಕಿನ ಗಡಿಭಾಗದ ತಡಸದ ತಾಯವ್ವನ ದೇವಸ್ಥಾನದ ಸಮೀಪ ಸಂಭವಿಸಿದೆ. ತಾಯವ್ವನ ದೇವಸ್ಥಾನದ ಸಮೀಪ ಘಟನೆ ನಡೆದಿದ್ದು, ಬೊಲೆರೋ ಪಿಕ್ ಅಪ್ ವಾಹನ ಮಾರುತಿ ಸ್ವಿಪ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ಕಾರಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದೆ, ಇನ್ನು ಡಿಕ್ಕಿಯ ರಭಸಕ್ಕೆ ಬೊಲೆರೋ ಪಿಕ್ ಅಪ್ ವಾಹನ ಪಲ್ಟಿಯಾಗಿದೆ. ಹೆಚ್ಚಿನ ಮಾಹಿತಿ ಇನ್ನೂ ತಿಳಿದು ಬರಬೇಕಿದೆ. ಗಾಯಗೊಂಡವರು...
ಕಾತೂರು ನಾಗನೂರು ರಸ್ತೆಯಲ್ಲಿ ಬೈಕುಗಳ ನಡುವೆ ಮುಖಾಮುಕಿ ಡಿಕ್ಕಿ, ಇಬ್ಬರಿಗೆ ಗಾಯ
ಮುಂಡಗೋಡ ತಾಲೂಕಿನ ಕಾತೂರು ಬಳಿ ಬೈಕುಗಳ ನಡುವೆ ಮುಖಾಮುಕಿ ಡಿಕ್ಕಿಯಾಗಿದೆ. ಪರಿಣಾಮ ಇಬ್ಬರೂ ಬೈಕ್ ಸವಾರರಿಗೆ ಗಾಯವಾಗಿದೆ. ಕಾತೂರು- ನಾಗನೂರು ರಸ್ತೆಯಲ್ಲಿ ಘಟನೆ ನಡೆದಿದ್ದು, ಬೈಕ್ ಗಳ ನಡುವೆ ಡಿಕ್ಕಿಯಲ್ಲಿ ಇಬ್ಬರಿಗೂ ಗಾಯವಾಗಿದೆ. ಗಾಯಾಳುಗಳನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.









