Home admin

Author: admin (ಶ್ರೀ ಆದಿಶಕ್ತಿ ಮಿಡಿಯಾ ಪ್ರೈವೇಟ್ ಲಿಮಿಟೆಡ್)

Post
ಇಂದೂರು ವಿದ್ಯಾರ್ಥಿಗಳಿಗೆ ಬಸ್ಸುಗಳೇ ಇಲ್ಲ..! ಅಧ್ಯಕ್ಷ ವಿ.ಎಸ್.ಪಾಟೀಲರೇ ಎಲ್ಲಿದ್ದೀರಿ..? ವಿದ್ಯಾರ್ಥಿಗಳ ಗೋಳು ಕಾಣ್ತಿಲ್ವಾ..?

ಇಂದೂರು ವಿದ್ಯಾರ್ಥಿಗಳಿಗೆ ಬಸ್ಸುಗಳೇ ಇಲ್ಲ..! ಅಧ್ಯಕ್ಷ ವಿ.ಎಸ್.ಪಾಟೀಲರೇ ಎಲ್ಲಿದ್ದೀರಿ..? ವಿದ್ಯಾರ್ಥಿಗಳ ಗೋಳು ಕಾಣ್ತಿಲ್ವಾ..?

ಮುಂಡಗೋಡ ತಾಲೂಕಿನಲ್ಲಿ ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳ ಗೋಳು ಕೇಳೋರೇ ಇಲ್ವಾ..? ಪ್ರತಿನಿತ್ಯವೂ ಶಾಲಾ ಕಾಲೇಜಿಗೆ ಹೋಗಲು ಬಸ್ ಗಳಿಲ್ಲದೇ ಪರದಾಡುವಂತಾಗಿದೆ. ಹೀಗಾಗಿನೇ ತಾಲೂಕಿನ ವಿದ್ಯಾರ್ಥಿಗಳು ಹಾಗೂ ಪಾಲಕರ ಆಕ್ರೋಶದ ಕಟ್ಟೆ ಒಡೆದಿದೆ. ಇಂದೂರಿನಲ್ಲಿ ಪ್ರತಿಭಟನೆ..!                                      ಈ ಕಾರಣಕ್ಕಾಗೇ, ಇಂದೂರಿನಲ್ಲಿ ಇಂದು ವಿದ್ಯಾರ್ಥಿಗಳು ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹಿಸಿ ಪ್ರತಿಭಟನೆ ಕೈಗೊಂಡ್ರು. ಇಂದೂರು...

Post
ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಹಿಳೆ; ಪೊಲೀಸರ ಸಮಯಪ್ರಜ್ಞೆಯಿಂದ ಬಚಾವ್..!

ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಹಿಳೆ; ಪೊಲೀಸರ ಸಮಯಪ್ರಜ್ಞೆಯಿಂದ ಬಚಾವ್..!

ಶಿವಮೊಗ್ಗ: ಚಲಿಸುವ ರೈಲಿನಿಂದ ಏಕಾಏಕಿ ಕೆಳಗೆ ಬಿದ್ದ ಮಹಿಳೆಯೋರ್ವಳು ಅದೃಷ್ಟವಶಾತ್ ಬಚಾವ್ ಆಗಿದ್ದಾಳೆ. ಶಿವಮೊಗ್ಗದ ಮುಖ್ಯ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದೆ. ಬೆಳ್ಳಂ ಬೆಳಿಗ್ಗೆ 7 ಗಂಟೆಗೆ ತಾಳಗುಪ್ಪ- ಬೆಂಗಳೂರು ಇಂಟರ್ ಸಿಟಿ ರೈಲು ಹೊರಡುವಾಗ, ಕುಟುಂಬದವರನ್ನು ಕಳಿಸಲು ಬಂದಿದ್ದ ಮಹಿಳೆ, ರೈಲು ಹೊರಟ ನಂತರ ಇಳಿಯಲು ಯತ್ನಿಸಿದ್ದಾಳೆ.ಈ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾಳೆ. ಇದೇ ವೇಳೆ ಅಲ್ಲೇ ಕರ್ತವ್ಯದಲ್ಲಿದ್ದ ರೇಲ್ವೇ ಪೊಲೀಸ್ ಸಮಯಪ್ರಜ್ಞೆ ತೋರಿದ್ದಾರೆ‌. ಹೀಗಾಗಿ, ಆ ಮಹಿಳೆ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ....

Post
ಮಳಗಿ ಹೋರಿಹಬ್ಬದ ವಿಜೇತರಿಗೆ ಬಹುಮಾನ ವಿತರಿಸಿದ ಸಂತೋಷ ಶೇಟ್ ರಾಯ್ಕರ್..!

ಮಳಗಿ ಹೋರಿಹಬ್ಬದ ವಿಜೇತರಿಗೆ ಬಹುಮಾನ ವಿತರಿಸಿದ ಸಂತೋಷ ಶೇಟ್ ರಾಯ್ಕರ್..!

ಮುಂಡಗೋಡ: ತಾಲೂಕಿನ ಮಳಗಿಯಲ್ಲಿ ನಡೆದ ಹೋರಿ ಬೆದರಿಸೋ ಸ್ಪರ್ಧೆಯ ವಿಜೇತ ಹೋರಿಗಳ ಮಾಲೀಕರಿಗೆ ಬಹುಮಾನ ನೀಡಲಾಯಿತು. ಮಳಗಿಯ ಸಂತೋಷ ಶೇಟ್ ರಾಯ್ಕರ್ ವಿಜೇತ ಹೋರಿಗಳಿಗೆ ಬಹುಮಾನ ನೀಡಿದ್ರು.. ಅತ್ಯುತ್ತಮ ಹಿಡಿತಗಾರರಿಗೂ ಬಹುಮಾನ ನೀಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಹೋರಿಹಬ್ಬದ ಅಭಿಮಾನಿಗಳ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.. ಗೃಹೋಪಯೋಗಿ ವಸ್ತುಗಳ ಆಕರ್ಶಕ ಬಹುಮಾನ ನೀಡಲಾಯಿತು.. ಈ ವೇಳೆ ಅಣ್ಣಪ್ಪ ಸಾವಿಕೇರಿ, ಲಕ್ಷ್ಮಣ ಗಡಕನಳ್ಳಿ, ಮಂಜು ಭೋವಿ, ಜಮೀರ್ ಶೇಖ್, ಮುಖೇಶ್ ತಳವಾರ್, ಗಣೇಶ್ ಕೋಡಿಹಳ್ಳಿ, ಪ್ರಶಾಂತ್ ದೋರಳ್ಳಿ, ಕೃಷ್ಣ...

Post
ಮಣ್ಣು ತೆಗೆಯುತ್ತಿದ್ದ ವೇಳೆ ಕುಸಿದ ಗುಡ್ಡ ವ್ಯಕ್ತಿ ಸಾವು..!

ಮಣ್ಣು ತೆಗೆಯುತ್ತಿದ್ದ ವೇಳೆ ಕುಸಿದ ಗುಡ್ಡ ವ್ಯಕ್ತಿ ಸಾವು..!

ಗೋಕರ್ಣ: ಮಣ್ಣು ತೆಗೆಯುತ್ತಿದ್ದ ವೇಳೆ ಗುಡ್ಡ ಕುಸಿದು ವ್ಯಕ್ತಿಯೋರ್ವ ಸಾವನ್ನಪ್ಪಿರೊ ಘಟನೆ, ಗೋಕರ್ಣದ ಚೌಡಗೇರಿಯಲ್ಲಿ ನಡೆದಿದೆ. ಜೆಸಿಬಿ ಬಳಸಿ ಮಣ್ಣು ತೆಗೆಯುತ್ತಿದ್ದ ವೇಳೆ ದುರ್ಘಟನೆ ನಡೆದಿದ್ದು, ಅಂಕೋಲಾ ಶಿಳ್ಯಾದ ಮೋಹನ್‌ದಾಸ್ ಹಮ್ಮಣ್ಣ ನಾಯಕ (56) ಮೃತ ವ್ಯಕ್ತಿಯಾಗಿದ್ದಾನೆ. ಖಾಸಗಿ ಜಾಗದಲ್ಲಿ ಗುಡ್ಡ ಭಾಗದ ಮಣ್ಣು ತೆಗೆಯುವ ಗುತ್ತಿಗೆ ಪಡೆದುಕೊಂಡು ಕೆಲಸ ಮಾಡಿಕೊಂಡಿದ್ದ ಮೋಹನ್‌ದಾಸ್, ಮಣ್ಣು ತೆಗೆಯುವ ಸ್ಥಳದಲ್ಲಿ ಸೂಪರ್‌ವೈಸಿಂಗ್ ಮಾಡುತ್ತಾ ಕೆಲಸ ಮಾಡಿಸುತ್ತಿದ್ದ. ಜೆಸಿಬಿಯಿಂದ ಎಡಭಾಗದಲ್ಲಿ ಮಣ್ಣು ತೆಗೆಸುತ್ತಿದ್ದ ವೇಳೆ ಬಲಭಾಗದಿಂದ ಗುಡ್ಡಕುಸಿತವಾಗಿ ಸಾವು. ಖಾಸಗಿ ಜಾಗದ...

Post
ಚಿಗಳ್ಳಿಯಲ್ಲಿ ಅಂದರ್ ಬಾಹರ್ ಆಡುತ್ತಿದ್ದ 14 ಜನರ ಮೇಲೆ ಕೇಸ್..!

ಚಿಗಳ್ಳಿಯಲ್ಲಿ ಅಂದರ್ ಬಾಹರ್ ಆಡುತ್ತಿದ್ದ 14 ಜನರ ಮೇಲೆ ಕೇಸ್..!

ಮುಂಡಗೋಡ: ತಾಲೂಕಿನ ಚಿಗಳ್ಳಿ ಗ್ರಾಮದ ಶ್ರೀ ಕಲ್ಮೇಶ್ವರ ಮಠದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟು ಆಟದಲ್ಲಿ ತೊಡಗಿದ್ದ ವೇಳೆ ಪೊಲೀಸರು ದಾಳಿ ನಡೆಸಿ, 14 ಜನರ ಮೇಲೆ ಕೇಸು ದಾಖಲಿಸಿದ ಘಟನೆ ನಡೆದಿದೆ. ಇನ್ನು ದಾಳಿ ವೇಳೆ ಅಂದರ್ ಬಾಹರ್ ಆಟದಲ್ಲಿ ಬಳಸಿದ್ದ ನಗದು 3,500 ರೂಪಾಯಿ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. 4 ಜನ ಆರೋಪಿಗಳು ದಾಳಿಯ ಕಾಲಕ್ಕೆ ಸೆರೆ ಸಿಕ್ಕಿದ್ದು ಇನ್ನುಳಿದವರು ಪರಾರಿಯಾಗಿದ್ದಾರೆ. ಮುಂಡಗೋಡ ಸಿಪಿಐ ಸಿದ್ದಪ್ಪ ಸಿಮಾನಿ ನೇತೃತ್ವದಲ್ಲಿ...

Post
ಚಿಗಳ್ಳಿ ಶಾಲೆಯಲ್ಲಿ ನಟ ಪುನೀತ್ ಪುಣ್ಯಸ್ಮರಣೆ..! ವಿದ್ಯಾರ್ಥಿಗಳಿಂದ “ಅಪ್ಪು”ವಿಗೆ ನಮನ..!!

ಚಿಗಳ್ಳಿ ಶಾಲೆಯಲ್ಲಿ ನಟ ಪುನೀತ್ ಪುಣ್ಯಸ್ಮರಣೆ..! ವಿದ್ಯಾರ್ಥಿಗಳಿಂದ “ಅಪ್ಪು”ವಿಗೆ ನಮನ..!!

ಮುಂಡಗೋಡ; ತಾಲೂಕಿನ ಚಿಗಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಟ ಪುನೀತ್ ರಾಜಕುಮಾರ್ ರವರ 11ನೇ ದಿನದ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಲ್ಲಿನ ಪುನೀತ್ ಅಭಿಮಾನಿಗಳು ಶಾಲಾ ಮಕ್ಕಳಿಗೆ ಪುನೀತ್ ನೆನಪಿಗಾಗಿ ಕಲಿಕಾ ಸಾಮಗ್ರಿಯ ಕಾಣಿಕೆ ನೀಡಿದ್ರು..ಈ ವೇಳೆ ಸಂತೋಷ ಆಲದಕಟ್ಟಿ, ಎಂ.ಪಿ.ಕುಸೂರ, ರಾಜಶೇಖರ ಹಿರೇಮಠ, ಉದಯ ಕುಸೂರ, ಪರಶುರಾಮ ಟಿಕ್ಕೋಜಿ, ಪರಶುರಾಮ ತೆಗ್ಗಳ್ಳಿ, ಮಹಾಬಲೇಶ್ವರ ಬನವಾಸಿ, ಸಿ.ಬಿ. ಅರಳಿಕಟ್ಟಿ, ಹುಸೇನಸಾಬ್ ಕೊಳಗಿ, ಉದಯ ಕುಸೂರ, ಮೋಹನ ಗುಲ್ಮಾನವರ, ಮುಖ್ಯಾಧ್ಯಾಪಕಿ ನಾಗರತ್ನಮ್ಮ, ಶಿಕ್ಷಕರಾದ ಬಸವರಾಜ ಬೆಂಡಲಗಟ್ಟಿ,...

Post
ಇಂದೂರಿನಲ್ಲಿ “ಪುನೀತ್” ಪುಣ್ಯಸ್ಮರಣೆ, ಕ್ಯಾಂಡಲ್ ಹಚ್ಚಿ ಶೃದ್ಧಾಂಜಲಿ..!

ಇಂದೂರಿನಲ್ಲಿ “ಪುನೀತ್” ಪುಣ್ಯಸ್ಮರಣೆ, ಕ್ಯಾಂಡಲ್ ಹಚ್ಚಿ ಶೃದ್ಧಾಂಜಲಿ..!

ಮುಂಡಗೋಡ: ತಾಲೂಕಿನ ಇಂದೂರಿನಲ್ಲಿ ದಿವಂಗತ ನಟ ಪುನೀತ್ ರಾಜಕುಮಾರ್ ರವರ 11 ದಿನದ ಪುಣ್ಯತಿಥಿಯ ನಿಮಿತ್ತ ಶೃದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಾಗಿತ್ತು. ಸೋಮವಾರ ಸಂಜೆ ಇಲ್ಲಿನ ಮುಖ್ಯ ಸರ್ಕಲ್ ನಲ್ಲಿ ಪುನೀತ್ ರಾಜಕುಮಾರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ನಂತರ ಮೇಣದ ಬತ್ತಿ ಹಚ್ಚಿ ಶೃದ್ಧಾಂಜಲಿ ಅರ್ಪಿಸಲಾಯಿತು. ಪುನೀತ್ ರಾಜಕುಮಾರ್ ಮತ್ತೆ ಹುಟ್ಟಿ ಬನ್ನಿ ಅಂತಾ ಘೋಷಣೆ ಕೂಗಿದ ಅಭಿಮಾನಿಗಳು ಪುನೀತ್ ಅಕಾಲಿಕ ನಿಧನಕ್ಕೆ ಕಂಬನಿ‌ ಮಿಡಿದ್ರು.

Post
ಸಿದ್ದನಕೊಪ್ಪದ ಕಬಡ್ಡಿ ಪಂದ್ಯಾವಳಿಯಲ್ಲಿ ಅತಿಥಿಗಳೇ ಕಣದಲ್ಲಿ ಘರ್ಜನೆ..!

ಸಿದ್ದನಕೊಪ್ಪದ ಕಬಡ್ಡಿ ಪಂದ್ಯಾವಳಿಯಲ್ಲಿ ಅತಿಥಿಗಳೇ ಕಣದಲ್ಲಿ ಘರ್ಜನೆ..!

ಮುಂಡಗೋಡ: ತಾಲೂಕಿನ ಕಾತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿದ್ದನಕೊಪ್ಪದಲ್ಲಿ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿಯಲ್ಲಿ ಉದ್ಘಾಟನೆಗೆ ಬಂದಿದ್ದ ಅತಿಥಿಗಳು ಕಬಡ್ಡಿ ಆಟ ಆಡಿ ಸಂಭ್ರಮಿಸಿದ್ರು. ಎರಡು ತಂಡಗಳಾಗಿ ಕಣಕ್ಕಿಳಿದ ಅತಿಥಿ ಮಹೋದಯರು ಕಬಡ್ಡಿ ಆಟದ ಮಜಲುಗಳನ್ನು ಪ್ರದರ್ಶಿಸಿದ್ರು. ಮಳಗಿಯ ಸಂತೋಷ ಶೇಟ್ ರಾಯ್ಕರ್,ಪಕ್ಕೀರಪ್ಪ, ಶಿವಾಜಿ ಸಿಂಧೆ, ಪ್ರಕಾಶ ಅಜ್ಜಮನವರ್ ಸೇರಿದಂತೆ ಹಲವರು ಕಬಡ್ಡಿ ಆಟದಲ್ಲಿ ಪಾಲ್ಗೊಂಡರು. ಇನ್ನು ನಿನ್ನೆಯಿಂದಲೂ ಸಿದ್ದನಕೊಪ್ಪ ಗ್ರಾಮದಲ್ಲಿ ಕಬಡ್ಡಿ ಪಂದ್ಯಾವಳಿಗಳು ನಡೆಯುತ್ತಿವೆ.

Post
ಮುಂಡಗೋಡ ತಾಲೂಕಿನ ಅಂಗನವಾಡಿಗಳಲ್ಲಿ ಮತ್ತೆ ಚಿಣ್ಣರ ಕಲರವ..!

ಮುಂಡಗೋಡ ತಾಲೂಕಿನ ಅಂಗನವಾಡಿಗಳಲ್ಲಿ ಮತ್ತೆ ಚಿಣ್ಣರ ಕಲರವ..!

ಮುಂಡಗೋಡ: ತಾಲೂಕಿನಲ್ಲಿ ಸೋಮವಾರದಿಂದ ಅಂಗನವಾಡಿ ಕೇಂದ್ರಗಳು ಮತ್ತೆ ಚಾಲನೆ ಪಡೆದುಕೊಂಡಿವೆ. ತಾಲೂಕಿನ ಪ್ರತೀ ಗ್ರಾಮಗಳಲ್ಲೂ ಅಂಗಮವಾಡಿ ಕೇಂದ್ರಗಳನ್ನು ಸ್ವಚ್ಚಗೊಳಿಸಿ, ತಳಿರು ತೋರಣಗಳಿಂದ ಶೃಂಗರಿಸಿ, ಪೂಜೆ ಮಾಡಿ ಪುನರಾರಂಭ ಮಾಡಲಾಗಿದೆ. ಕೊರೋನಾ ಸಂಕಷ್ಟದ ನಡುವೆ ಬಂದ್ ಆಗಿದ್ದ ಅಂಗನವಾಡಿಗಳು ಇಂದಿನಿಂದ ಪುಟ್ಟ ಪುಟ್ಟ ಮಕ್ಕಳ ಕಲರವದೊಂದಿಗೆ ಶುರುವಾದವು. ತಾಲೂಕಿನ ಅಗಡಿಯಲ್ಲಿ ಅಂಗನವಾಡಿಯ ಪುನರಾರಂಭಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅಂಗನವಾಡಿ ಕಾರ್ಯಕರ್ತರು ಮಕ್ಕಳನ್ನು ಬರಮಾಡಿಕೊಂಡರು..

Post
ಮುಂಡಗೋಡಿನಲ್ಲಿ ಹಾಡಹಗಲೇ ಕಳ್ಳನ ಕರಾಮತ್ತು, ಹಣದ ಬ್ಯಾಗ್ ಕಿತ್ತು ಪರಾರಿ ಯತ್ನ, ಬೆನ್ನತ್ತಿ ಹಿಡಿದ ಸಾರ್ವಜನಿಕರು..!

ಮುಂಡಗೋಡಿನಲ್ಲಿ ಹಾಡಹಗಲೇ ಕಳ್ಳನ ಕರಾಮತ್ತು, ಹಣದ ಬ್ಯಾಗ್ ಕಿತ್ತು ಪರಾರಿ ಯತ್ನ, ಬೆನ್ನತ್ತಿ ಹಿಡಿದ ಸಾರ್ವಜನಿಕರು..!

ಮುಂಡಗೋಡ: ಪಟ್ಟಣದಲ್ಲಿ ಚಾಲಾಕಿ ಕಳ್ಳನೊಬ್ಬ ಹಾಡಹಗಲೇ ಹಣದ ಬ್ಯಾಗ್ ಕಿತ್ತುಕೊಂಡು ಓಡಿ ಹೋದ ಘಟನೆ ನಡೆದಿದೆ.. ಪಟ್ಟಣದ ಅಂಚೆ ಕಚೇರಿಯ ಸಿಬ್ಬಂದಿಯೊಬ್ಬರು ಇಂದು ಒಂದು ಲಕ್ಷ ರೂ. ಹಣವನ್ನು ತಮ್ಮ ಬ್ಯಾಗ್ ನಲ್ಲಿಟ್ಟುಕೊಂಡು ಬ್ಯಾಂಕ್ ಗೆ ಜಮಾ ಮಾಡಲು ಹೊರಟಿದ್ದಾರೆ. ಈ ವೇಳೆ ಯಲ್ಲಾಪುರ ರಸ್ತೆಯ ತಂಗಮ್ ಮೆಡಿಕಲ್ಸ್ ನಲ್ಲಿ ಮಾತ್ರೆ ಖರೀಧಿಸಲು ಹೋಗಿದ್ದಾರೆ‌. ಈ ವೇಳೆ ಇದನ್ನೇಲ್ಲ ಗಮಿಸುತ್ತಲೇ ಇದ್ದ ವ್ಯಕ್ತಿ ಏಕಾಏಕಿ ಬ್ಯಾಗ್ ಕಿತ್ತುಕೊಂಡು ಓಡಿ ಹೋಗಿದ್ದಾನೆ. ನಂತರ ಬ್ಯಾಗ್ ಕಳೆದುಕೊಂಡ ಅಂಚೆಕಚೇರಿ ಸಿಬ್ಬಂದಿ...

error: Content is protected !!