ಮುಂಡಗೋಡ: ತಾಲೂಕಿನ ಹುನಗುಂದ,ಇಂದೂರು ಸೇರಿದಂತೆ ಹಲವು ಕಡೆ ಗಾಳಿ, ಗುಡುಗು, ಮಿಂಚು ಆಲಿಕಲ್ಲು ಸಹಿತ ಭರ್ಜರಿ ಮಳೆಯಾಗಿದೆ. ಸುಮಾರು ಒಂದು ತಾಸಿಗೂ ಹೆಚ್ಚು ಸುರಿದ ಮಳೆಯ ಕಾರಣಕ್ಕೆ ಬಿಸಿಲ ಬೇಗೆಯಿಂದ ಬಸವಳಿದಿದ್ದ ತಾಲೂಕಿನ ಮಂದಿಗೆ ಮಳೆರಾಯ ತಂಪೆರೆದಿದ್ದಾನೆ. ಭಾರೀ ಗಾಳಿ..! ಸಂಜೆ ನಾಲ್ಕೂವರೆ ಅಷ್ಟೊತ್ತಿಗೆ ಶುರುವಾದ ಭರ್ಜರಿ ಮಳೆಗೂ ಮೊದಲು ಭಾರೀ ಗಾಳಿ ಬೀಸಿದೆ. ಪರಿಣಾಮ ಗಿಡ ಮರಗಳ ಟೊಂಗೆಗಳು ಎಲ್ಲೆಲ್ಲೂ ಮುರಿದು ಬಿದ್ದಿದೆ. ಉರುಳಿದ ಮರ..! ಶಿರಸಿ ರಸ್ತೆಯಲ್ಲಿ ಮರಬಿದ್ದು ಕೆಲಹೊತ್ತು ರಸ್ತೆ ಸಂಚಾರ ಸ್ಥಗಿತವಾಗಿತ್ತು....
Top Stories
ಹುಬ್ಬಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಮುಂಡಗೋಡಿನ ಮಹದೇಶ್ವರ ಲಿಂಗದಾಳ, RTI ಹೆಸ್ರಲ್ಲಿ ಈ ವಂಚಕ ಪಡೆ ಮಾಡಿದ್ದೇನು..?
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
ಟ್ರಾಕ್ಟರ್ ರೂಟರ್ ನಲ್ಲಿ ಕಾಲು ಸಿಲುಕಿ ಕಾಲೇ ಕಟ್, ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಭೀಕರ ಘಟನೆ..!
ಮುಂಡಗೋಡ ಪೊಲೀಸರ ನೇತೃತ್ವದಲ್ಲಿ ಏಕತಾ ವಾಕ್ ಥಾನ್..! ಸರ್ದಾರ್ ಪಟೇಲರ ಜನ್ಮದಿನದಂದು ಏಕತಾ ದಿವಸ್ ಆಚರಣೆ..!
ಮುಂಡಗೋಡಿನ ಹಿರಿಯ ರಥಶಿಲ್ಪಿ ವಿರೂಪಾಕ್ಷಪ್ಪ ಬಡಿಗೇರ ನಿಧನ…!
ಮುಂಡಗೋಡ ಪಪಂ ಮಾಜಿ ಅಧ್ಯಕ್ಷ ರಾಮಣ್ಣ ಕುನ್ನೂರ್ ನಿಧನ..!
ಮಳಗಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದ ಶಿರಸಿ ಹುಬ್ಬಳ್ಳಿ KSRTC ಬಸ್, ತಪ್ಪಿದ ಅನಾಹುತ..!
ಪಾಳಾದಲ್ಲಿ KSRTC ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ, ಬಸ್ ಗಾಗಿ ಬಸ್ ತಡೆದು ಪ್ರತಿಭಟನೆ..!
ತಡಸ ತಾಯವ್ವ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿ ಹಲವರಿಗೆ ಗಾಯ..!
ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಅಟ್ಯಾಕ್..!
ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ..!
KDCC ಕುಸ್ತಿಯಲ್ಲಿ ಹೆಬ್ಬಾರ್ ಬಣದ್ದೇ ಮೇಲುಗೈ, ಮಂಕಾಳು ವೈದ್ಯರ ಬಣಕ್ಕೆ ನಿರಾಸೆ..!
ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!
ಭಾರೀ ಮಳೆ ಮುನ್ಸೂಚನೆ ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಕರೆ
ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!
ಸನವಳ್ಳಿ ಬಳಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ..!
Author: admin (ಶ್ರೀ ಆದಿಶಕ್ತಿ ಮಿಡಿಯಾ ಪ್ರೈವೇಟ್ ಲಿಮಿಟೆಡ್)
ಮುಂಡಗೋಡಿನಲ್ಲಿ ವೀರಶೈವ ಧರ್ಮ ಸಂಸ್ಥಾಪಕ ರೇಣುಕಾಚಾರ್ಯ ಜಯಂತಿ ಆಚರಣೆ..!
ಮುಂಡಗೋಡಿನಲ್ಲಿ ವೀರಶೈವ ಧರ್ಮ ಸಂಸ್ಥಾಪಕ ರೇಣುಕಾಚಾರ್ಯ ಜಯಂತಿ ಆಚರಣೆ..! ಮುಂಡಗೋಡ: ಪಟ್ಟಣದ ಬಸವಣ್ಣ ದೇವಸ್ಥಾನದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ಪುರೋಹಿತ ಘಟಕ ವತಿಯಿಂದ ಶ್ರೀಮದ್ ವೀರಶೈವ ಧರ್ಮದ ಸಂಸ್ಥಾಪಕ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ ಮಾಡಲಾಯಿತು.. ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಪುರೋಹಿತ ಘಟಕದ ಅಧ್ಯಕ್ಷ, ವೇ. ಪವನ್ ಕುಮಾರ್ ಶಾಸ್ತ್ರಿಗಳು ಕೋರಿಮಠ, ಸಾಕಿನ ಮಳವಳ್ಳಿ, ಉಪಾಧ್ಯಕ್ಷರಾದ ವೇ. ಬಸಯ್ಯ ಶಾಸ್ತ್ರಿಗಳು ತೋಟಯ್ಯನವರು ಸಾ, ಹುನುಗುಂದ, ಮೃತ್ಯುಂಜಯ ಶಾಸ್ತ್ರಿಗಳು ಹಿರೇಮಠ್, ಸನವಳ್ಳಿ, ವೇ. ರೇಣುಕಯ್ಯ...
ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶವಿಲ್ಲ; ಹೈಕೋರ್ಟ್ ಮಹತ್ವದ ಐತಿಹಾಸಿಕ ತೀರ್ಪು
ಬೆಂಗಳೂರು: ಹಿಜಾಬ್ ವಿವಾದದ ಕುರಿತು ಹೈಕೋರ್ಟ ತ್ರಿಸದಸ್ಯ ಪೀಠ ಐತಿಹಾಸಿಕ ತೀರ್ಪು ಪ್ರಕಟವಾಗಿದೆ. ಹಿಜಾಬ್ ಅನ್ನೋದು ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವೇ ಅಲ್ಲ ಅಂತಾ ಮಹತ್ವದ ಆದೇಶ ನೀಡಿದೆ. ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ. ಸರ್ಕಾರದ ವಸ್ತ್ರಸಂಹಿತೆಯನ್ನು ಪ್ರಶ್ನಿಸುವಂತಿಲ್ಲ. ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶವಿಲ್ಲ. ಮಹತ್ವದ ಐತಿಹಾಸಿಕ ತೀರ್ಪು ಪ್ರಕಟಿಸಿದ ಹೈಕೋರ್ಟ್ ತ್ರಿಸದಸ್ಯ ಪೀಠ.
ಯಲ್ಲಾಪುರ ಕ್ಷೇತ್ರದ ಕೇಸರಿ ಪಡೆಯಲ್ಲಿ ಇದೇನಿದು “ಆಲೆಮನೆ” ಮೀಟಿಂಗು..? ಅಷ್ಟಕ್ಕೂ, ಬಂಡೇದ್ದ ಬಳಗದ ಲೀಡರ್ ಯಾರು..?
ಯಲ್ಲಾಪುರ ಬಿಜೆಪಿಗೆ ಅದೇನಾಗಿದೆಯೋ ಗೊತ್ತಿಲ್ಲ. ಪಂಚರಾಜ್ಯಗಳ ಚುನಾವಣೆಲಿ ಅಭೂತಪೂರ್ವ ಯಶಸ್ಸು ಪಡೆದ ಸಂಭ್ರಮದ ಮದ್ಯೆಯೂ, ಒಳಗೊಳಗೇ ಯಾರೂ ನಿರೀಕ್ಷಿಸದ ಲೋಕಲ್ ಬೆಳವಣಿಗೆಗಳು ನಡೆಯುತ್ತಿವೆ. ಸದ್ಯದ ಪರಿಸ್ಥಿತಿಗಳು ಹಾಗೂ ಒಳಗೊಳಗಿನ ಚಟುವಟಿಕೆಗಳು ಬಲಿಷ್ಟವಾಗುತ್ತ ಹೋದರೆ ಇನ್ನೇನು ಚುನಾವಣೆ ಹೊತ್ತಿಗೇಲ್ಲ ಭರ್ಜರಿ ಬದಲಾವಣೆಗಳು ಆಗಲಿವೆ ಅನ್ನೋದು ಅದೇ ಪಕ್ಷದ ದೊಡ್ಡ ಮಂದಿಯೇ ಹೇಳುತ್ತಿರೋ ಬಹುದೊಡ್ಡ ಮಾತುಗಳು. ಆ ಆರು ತಿಂಗಳು..! ನಿಜ ಕಳೆದ ಆರು ತಿಂಗಳಿಂದ ಯಲ್ಲಾಪುರ, ಮುಂಡಗೋಡ ಬಿಜೆಪಿಯಲ್ಲಿ ಅದೊಂದು ಬಣ ಇನ್ನಿಲ್ಲದಂತೆ ಆ್ಯಕ್ಟಿವ್ ಆಗಿದೆಯಂತೆ. ಮೇಲಿಂದ ಮೇಲೆ...
“ಮಳೆ ಬಂದು ಭೂಮಿತಾಯಿ ಉಡಿ ತುಂಬಿತಲೇ ಪರಾಕ್” ಚೌಡಳ್ಳಿ ಮೈಲಾರಲಿಂಗನ ಕಾರಣೀಕ..!
ಮುಂಡಗೋಡ: ತಾಲೂಕಿನ ಚೌಡಳ್ಳಿ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಪ್ರತೀ ವರ್ಷದಂತೆ ಈ ವರ್ಷವೂ ಮೈಲಾರಲಿಂಗೇಶ್ವರ ಕಾರಣೀಕ ನುಡಿ ಹೊರಬಿದ್ದಿದೆ. ವೃತಾಧಾರಿ ಜಗಧೀಶ್ ಮಡ್ಲಿ ಬಿಲ್ಲನ್ನೇರಿ, ಆಕಾಶದತ್ತ ಶೂನ್ಯ ದೃಷ್ಟಿಸುತ್ತ ಮತ್ತೆ ಕಾರಣೀಕ ನುಡಿದಿದ್ದಾರೆ. ತಾತ್ಪರ್ಯವೇನು..? “ಮಳೆ ಬಂದು ಭೂಮಿತಾಯಿ ಉಡಿ ತುಂಬಿತಲೇ ಪರಾಕ್” ಪ್ರಸಕ್ತ ವರ್ಷದ ಚೌಡಳ್ಳಿ ಮೈಲಾರಲಿಂಗನ ಕಾರಣೀಕವಿದು. ಅಂದಹಾಗೆ, ಪ್ರಸಕ್ತ ವರ್ಷದ ಕಾರಣೀಕದ ತಾತ್ಪರ್ಯ ಬಹುತೇಕ ರೈತರ ಕೃಷಿಗೆ ಸಂಬಂಧಿಸಿದಂತೆ ಹೊರಬಿದ್ದಿದೆ. ಮಳೆ, ಬೆಳೆಯ ಭವಿಷ್ಯ ನುಡಿಯಲಾಗಿದೆ. ಕಾರಣೀಕ ನುಡಿಯ...
ಚಾಲಕನ ನಿಯಂತ್ರಣ ತಪ್ಪಿ ಟ್ರಾಕ್ಟರ್ ಗೆ ಗುದ್ದಿದ ಲಾರಿ, ಎರಡು ಟ್ರಾಕ್ಟರ್ ನುಜ್ಜು,ಗುಜ್ಜು..!
ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ಎರಡು ಟ್ರಾಕ್ಟರ್‌ಗಳಿಗೆ ಲಾರಿ ಡಿಕ್ಕಿಯಾಗಿ ಭಾರೀ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಎರಡೂ ಟ್ರಾಕ್ಟರ್‌ಗಳು ಸಂಪೂರ್ಣ ಜಖಂ ಆಗಿವೆ. ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಪಟ್ಟಣದ ಹುಂಡೇಕಾರ್ ಭಟ್ಟಿ ಬಳಿಯ ರಾಜ್ಯ ಹೆದ್ದಾರಿ 50ರಲ್ಲಿ ಘಟನೆ ನಡೆದಿದೆ. ಲಾರಿ ಹಾಗೂ ಟ್ರಾಕ್ಟರ್ ಡ್ರೈವರ್‌ಗಳಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಟಿಬೇಟಿಯನ್ ಕ್ಯಾಂಪ್ ನಂ.6 ರ ಕ್ರಾಸ್ ಬಳಿ ಅಪಘಾತ, ಸ್ಕೂಟಿ ಸವಾರನಿಗೆ ಗಂಭೀರ ಗಾಯ.!
ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂಬರ್ 6 ರ ಕ್ರಾಸ್ ಬಳಿ ಕಲಘಟಗಿ ರಸ್ತೆಯಲ್ಲಿ ಅಪಘಾತವಾಗಿದೆ. ಟಾಟಾ ಎಸ್ ವಾಹನ ಮತ್ತು ಸ್ಕೂಟಿ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಸ್ಕೂಟಿ ಸವಾರನಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಗಾಯಗೊಂಡವನು ಮುಂಡಗೋಡ ತಾಲೂಕಿನ ಕಾತೂರು ಗ್ರಾಮದವನು ಅಂತಾ ತಿಳಿದು ಬಂದಿದೆ. ಕಲಘಟಗಿ ಕಡೆಯಿಂದ ಮುಂಡಗೋಡ ಕಡೆಗೆ ಹೊರಟಿದ್ದ ಟಾಟಾ ಎಸ್ ವಾಹನಕ್ಕೆ, ಮುಂಡಗೋಡ ಕಡೆಯಿಂದ ಕಲಘಟಗಿ ಕಡೆಗೆ ಹೊರಟಿದ್ದ ಸ್ಕೂಟಿ ಡಿಕ್ಕಿಯಾಗಿದೆ. ಸದ್ಯ ಸ್ಕೂಟಿ ಸವಾರನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ...
ವಿದ್ಯಾರ್ಥಿಗಳ ಮೇಲೆ ಬಿದ್ದ ಶಾಲಾ ಕೊಠಡಿ ಸ್ಲಾಬ್, ಐವರು ವಿದ್ಯಾರ್ಥಿಗಳಿಗೆ ಗಾಯ
ಅಂಕೋಲಾ: ನಿರ್ಮಲಾ ಕಾನ್ವೆಂಟ್ ಶಾಲೆಯ ತರಗತಿ ಕೊಠಡಿಯಲ್ಲಿ ವಿದ್ಯಾರ್ಥಿಗಳು ಕುಳಿತಿದ್ದ ವೇಳೆ ಸ್ಲಾಬ್ ನ ಸಿಮೆಂಟ್ ಕುಸಿದು ಮಕ್ಕಳು ಗಾಯಗೊಂಡ ಘಟನೆ ಅಂಕೋಲಾದಲ್ಲಿ ನಡೆದಿದೆ. ಗಾಯಗೊಂಡ ಮಕ್ಕಳನ್ನು ತಾಲೂಕಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ನಾಲ್ಕನೇ ತರಗತಿಯ ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಮಕ್ಕಳ ಊಟದ ಸಮಯದಲ್ಲಿ ಸ್ಲಾಬ್ ನಿಂದ ಸಿಮೆಂಟ್ ತುಂಡುಗಳು ಒಂದೇ ಸಮನೆ ಕುಸಿದು, ಅಡಿಯಲ್ಲಿ ಕುಳಿತಿದ್ದ ಮಕ್ಕಳ ಮೈಮೇಲೆ ಬಿದ್ದಿವೆ. ಹೀಗಾಗಿ, ನಾಲ್ಕನೇ ತರಗತಿಯ ಮಕ್ಕಳಿಗೆ ಗಾಯವಾಗಿದೆ. ಅಲ್ಲದೇ ಮಕ್ಕಳು ಗಾಬರಿಗೊಂಡಿವೆ. ಘಟನಾ ಸ್ಥಳಕ್ಕೆ ಶಿಕ್ಷಣ...
ಹಡಪದ ಅಪ್ಪಣ್ಣ ಸಮಾಜದ ನೂತನ ರಾಜ್ಯಾಧ್ಯಕ್ಷರಾಗಿ ಸಿದ್ದಪ್ಪ ಹಡಪದ ಪದಗ್ರಹಣ..!
ಹಾವೇರಿ: ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ(ರಿ) ಬೆಂಗಳೂರು, ಇದರ ಮೂರು ವರ್ಷದ ಅವಧಿಗಾಗಿ ಸಿದ್ದಪ್ಪ ಹಡಪದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದ ಸಿದ್ದಪ್ಪ ಹಡಪದ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ್ದ ಯುವ ನಾಯಕರಾಗಿದ್ದಾರೆ. ಹೀಗಾಗಿ, ಹಾವೇರಿಯ ಗುರುಭವನದಲ್ಲಿ ಇಂದು ನಡೆದ ಚಿನಾವಣೆಯಲ್ಲಿ ಈ ನೂತನ ಅಧ್ಯಕ್ಷರು ಹಾಗೂ ಇನ್ನುಳಿದ ಪದಾಧಿಕಾರಿಗಳ ಆಯ್ಕೆಯಾಗಿದೆ. ಇನ್ನುಳಿದಂತೆ, ರಾಜ್ಯ ಉಪಾಧ್ಯಕ್ಷರಾಗಿ ಬೆಳಗಾವಿ ಜಿಲ್ಲೆ ಬೈಲಹೊಂಗಲದ, ಸಂತೋಷ ಹಡಪದ. ಪ್ರಧಾನ ಕಾರ್ಯದರ್ಶಿಯಾಗಿ ಬೆಂಗಳೂರು ಬಸರಕೋಡದ, ಚಿದಾನಂದ...
ವಡಗಟ್ಟಾ ಚೆಕ್ ಪೊಸ್ಟ್ ನಲ್ಲಿ ಎತ್ತುವಳಿ ದಂಧೆ..? ಅರಣ್ಯ ಸಿಬ್ಬಂದಿಗಳೇ ಇಲ್ಲಿ ದಂಧೆಗೆ ಇಳಿದು ಬಿಟ್ರಾ..?
ಮುಂಡಗೋಡ: ತಾಲೂಕಿನ ಗಡಿಭಾಗದ ವಡಗಟ್ಟಾ ಚೆಕ್ ಪೊಸ್ಟ್ ಅಂದ್ರೆ ಅರಣ್ಯ ಉತ್ಪನ್ನ ತನಿಖಾ ಠಾಣೆ ಅನ್ನೋದು ನಾಮಕೆವಾಸ್ತೆ ಅನ್ನುವಂತಾಗಿದೆ. ಉತ್ತರ ಕನ್ನಡದ ಅದ್ರಲ್ಲೂ ಮುಂಡಗೋಡ ತಾಲೂಕಿನ ಅಮೂಲ್ಯ ಅರಣ್ಯ ಸಂಪತ್ತಿನ ರಕ್ಷಣೆಗಾಗಿ ಪ್ರತಿಷ್ಟಾಪಿಸಲ್ಪಟ್ಟಿರೋ ವಡಗಟ್ಟಾ ಅರಣ್ಯ ಉತ್ಪನ್ನಗಳ ತನಿಖಾ ಠಾಣೆ ಚೆಕ್ ಪೊಸ್ಟ್ ನಲ್ಲಿ ಕೆಲವು ಅರಣ್ಯ ಇಲಾಖೆ ಸಿಬ್ಬಂದಿಗಳೇ ಎತ್ತುವಳಿಗೆ ನಿಂತಿದ್ದಾರಾ..? ಈ ದೃಷ್ಯ ನೋಡಿದ್ರೆ ಹಾಗೆ ಅನ್ನಿಸತ್ತೆ. ದೃಷ್ಯ ನಂಬರ್ 1. ದಂಧೆ ಮಾಡಿಕೊಂಡ್ರಾ..? ಇದು ವಡಗಟ್ಟಾ ಅರಣ್ಯ ಚೆಕ್‌ಪೋಸ್ಟ್ ನಲ್ಲಿ ನಿತ್ಯವೂ ನಡೆಯುವ...








