ಮುಂಡಗೋಡ-ತಾಲೂಕಿನ ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಇಂದು ಗ್ರಾಮ ಪಂಚಾಯತಿ ವತಿಯಿಂದ ಸ್ಯಾನಿಟೈಸ್ ಸಿಂಪಡಣೆ ಮಾಡಲಾಯಿತು.. ನಂದಿಕಟ್ಟಾ ಗ್ರಾಮ ಪಂಚಾಯತಿ ಆವರಣದಲ್ಲಿ ಸ್ಯಾನಿಟೈಸ್ ವಾಹನಕ್ಕೆ ಚಾಲನೆ ನೀಡಿದ ಗ್ರಾಮ ಪಂಚಾಯತಿ ಅಧ್ಯಕ್ಷೆ, ಗ್ರಾಮದಲ್ಲಿ ಸ್ಯಾನಿಟೈಸ್ ಕಾರ್ಯ ಸಂಪೂರ್ಣಗೊಳಿಸುವಂತೆ ಸೂಚಿಸಿದ್ರು.. ಆನಂತರದಲ್ಲಿ ಗ್ರಾಮದ ಗಲ್ಲಿ ಗಲ್ಲಿಗಳಲ್ಲಿ ಸ್ಯಾನಿಟೈಸ್ ಮಾಡಲಾಯಿತು.. ಈ ವೇಳೆ ಗ್ರಾಮ ಪಂಚಾಯತಿ ಸದಸ್ಯರು, ಸಿಬ್ಬಂದಿಗಳು ಹಾಜರಿದ್ದರು..
Top Stories
ವೈದ್ಯಕೀಯ ಸೇವೆಗೆ ಸದಾ ಸನ್ನದ್ದವಾಗಿರಿ : ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ..!
CBSE, SSLC ಫಲಿತಾಂಶ ಪ್ರಕಟ: ಮುಂಡಗೋಡ ಲೊಯೊಲಾ ಕೇಂದ್ರೀಯ ವಿದ್ಯಾಲಯ 100% ಫಲಿತಾಂಶದ ಸಾಧನೆ..! ಮಾನಸಿ ಸಿದ್ದಿ ಪ್ರಥಮ..!
ಕೊಲ್ಕೊತ್ತಾದ ಮೇಲೆ ದಾಳಿ ಮಾಡಿ ವಶ ಪಡಿಸಿಕೊಳ್ತಿವಿ, ಆತ್ಮಹತ್ಯಾ ಬಾಂಬ್, ತಾಲಿಬಾನಿ ಶೈಲಿಯ ದಾಳಿ ಮಾಡ್ತಿವಿ ಅಂತ ಅಂದವನು ಯಾರೀತ..?
ಭಾರತ-ಪಾಕಿಸ್ತಾನ ಪರಮಾಣು ಯುದ್ಧ ನಿಲ್ಲಿಸಲು ‘ಸಹಾಯ’ ಮಾಡಿದ್ದೇವೆ..! ಕದನ ವಿರಾಮಕ್ಕೆ ನಾವೇ ಕಾರಣ ಅಂದ “ದೊಡ್ಡಣ್ಣ”
ಪ್ರಧಾನಿ ಮೋದಿ ಭಾಷಣ ಮುಗಿಸಿದ ಕೆಲವೇ ಹೊತ್ತಲ್ಲಿ ಜಲಂಧರ್ ಬಳಿ ಕಣ್ಗಾವಲು ಡ್ರೋನ್ ಹೊಡೆದುರುಳಿಸಿದ ಸೇನೆ ; ವಿದ್ಯುತ್ ಸ್ಥಗಿತ
ಭಾರತದ ವಾಯುದಾಳಿಗೆ ನಡುಗಿದ ನೂರ್ ಖಾನ್, ವಾಯುನೆಲೆ ಮೇಲಿನ ದಾಳಿ ನಂತರ ಬಂಕರ್ ನಲ್ಲಿ ಅಡಗಿದ ಪಾಕ್ ಸೇನಾ ಮುಖ್ಯಸ್ಥ
ಬೆಳಗಾವಿಯ ಸಂತಿ ಬಸ್ತವಾಡದ ಮಸೀದಿಯಲ್ಲಿನ ಕುರಾನ್ ಸುಟ್ಟು ಹಾಕಿದ ಕಿಡಿಗೇಡಿಗಳು, ಪ್ರತಿಭಟನೆ..!
ಕ್ಷುಲಕ ಕಾರಣಕ್ಕೆ ಬಾಲಕರ ಜಗಳ, ಕೊಲೆಯಲ್ಲಿ ಅಂತ್ಯ.. 9ನೇ ತರಗತಿ ಬಾಲಕನಿಗೆ ಚಾಕು ಇರಿದ 6ನೇ ತರಗತಿ ಬಾಲಕ..!
ಆಪರೇಶನ್ ಸಿಂಧೂರ | ಪಾಕಿಸ್ತಾನದ ಮಿರಾಜ್ ಯುದ್ಧ ವಿಮಾನ, ಚೀನಾ ನಿರ್ಮಿತ ಏರ್ ಡಿಫೆನ್ಸ್ ಧ್ವಂಸ : ಸೇನೆಯಿಂದ ವೀಡಿಯೊ ಬಿಡುಗಡೆ..!
ಕಾರವಾರದಲ್ಲಿ ವೈಮಾನಿಕ ದಾಳಿ, ಸಾವಿರಾರು ಮಂದಿಯ ರಕ್ಷಣೆ..! ಬಾಂಬ್ ದಾಳಿ, 37 ಜನ ಬಚಾವ್..!!
ತೀವ್ರ ಅಪೌಷ್ಠಿಕತೆಯಿಂದ ಕೂಡಿದ ಮಕ್ಕಳನ್ನು ಸೂಕ್ತ ಚಿಕಿತ್ಸೆಗೆ ಒಳಪಡಿಸಿ : ಜಿಲ್ಲಾಧಿಕಾರಿ
ಪ್ರಸಕ್ತ ವರ್ಷದ “ಮಾನ್ಸೂನ್” ನಿಗದಿತ ಸಮಯಕ್ಕಿಂತಲೂ ಮುಂಚೇಯೇ ಆಗಮನ ಸಾಧ್ಯತೆ..!
ಕರ್ನಾಟಕದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂದಿನಿಂದ ಗುಡುಗು ಸಹಿತ ಗಾಳಿ ಮಳೆ ; ಮುನ್ಸೂಚನೆ
ಕಾಮೆಡಿ ಕಿಲಾಡಿಯ ಹಾಸ್ಯ ಕಲಾವಿದ, ರಾಕೇಶ್ ಪೂಜಾರಿ ಇನ್ನಿಲ್ಲ..!
ಸಿಡಿಲು ಬಡಿದು ಇಬ್ಬರು ರೈತ ಮಹಿಳೆಯರು ದಾರುಣ ಸಾವು..!
ಪಾಕಿಸ್ತಾನದ 700 ಡ್ರೋನ್, ಕೆಲವು ಜೆಟ್ ಗಳು ಧ್ವಂಸ ; ಭಾರತದ ಎಲ್ಲ ಪೈಲಟ್ ಗಳು ಸುರಕ್ಷಿತ : ಡಿಜಿಎಂಒ
ಈ ಬಾರಿ “ಹಾವಿನ ತಲೆಗಳನ್ನು ಕೊಲ್ಲಲು ನಿರ್ಧರಿಸಿದೆ, ಕಾಲುಗಳನ್ನಲ್ಲ” ಭಾರತದ ಸ್ಪಷ್ಟ ಮಾತು..!
ಪಿಒಕೆ ಹಿಂತಿರುಗಿಸಿ, ಉಗ್ರರನ್ನು ಹಸ್ತಾಂತರಿಸಿ ; ಇದು ಬಿಟ್ಟು ಬೇರೆ ಮಾತುಕತೆ ಇಲ್ಲ; ಡಿಜಿಎಂಒ ಸಭೆಗೂ ಮುನ್ನ ಪಾಕಿಸ್ತಾನಕ್ಕೆ ಭಾರತ ಸ್ಪಷ್ಟ ಸಂದೇಶ
ಪಾಪಿಗಳ ರಕ್ತ ಹರಿಸದೇ ಕದನವಿರಾಮ ಆಗಿದ್ದನ್ನು ನಾವು ಒಪ್ಪುವುದಿಲ್ಲ: ಪ್ರಮೋದ್ ಮುತಾಲಿಕ್..!
ಚೌಡಳ್ಳಿ ಗ್ರಾಮಕ್ಕೆ ಸಂಪೂರ್ಣ ಸ್ಯಾನಿಟೈಸ್..!
ಮುಂಡಗೋಡ- ತಾಲೂಕಿನ ಚವಡಳ್ಳಿ ಗ್ರಾಮದಲ್ಲಿ ಇಂದು ಇಡೀ ಗ್ರಾಮದ ಗಲ್ಲಿ ಗಲ್ಲಿಗಳಿಗೂ ಗ್ರಾಮ ಪಂಚಾಯತಿ ವತಿಯಿಂದ ಸ್ಯಾನಿಟೈಸ್ ಮಾಡಲಾಯಿತು.. ಗ್ರಾಮ ಪಂಚಾಯತಿ ಆವರಣದಲ್ಲಿ ಸ್ಯಾನಿಟೈಸ್ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರು ಚಾಲನೆ ನೀಡಿದ್ರು.. ನಂತರ ಅಗಡಿ ಗ್ರಾಮದ ಬಹುತೇಕ ಗಲ್ಲಿಗಳಿಗೆ ತೆರಳಿ ಸ್ಯಾನಿಟೈಸ್ ಮಾಡಲಾಯಿತು.. ಅದಕ್ಕೂ ಮೊದಲು ಗ್ರಾಮದಲ್ಲಿ ಧ್ವನಿ ವರ್ದಕದ ಮೂಲಕ ಗ್ರಾಮಸ್ತರಿಗೆ ತಿಳುವಳಿಕೆ ನೀಡಲಾಯಿತು..ಈ ವೇಳೆ ಗ್ರಾಮ ಪಂಚಾಯತಿ ಸದಸ್ಯರು ಮುಂದೆ ನಿಂತು ಸ್ಯಾನಿಟೈಸ್ ಕಾರ್ಯ ನೆರವೇರಿಸಿದ್ರು.
ತಾಲೂಕಿನಲ್ಲಿ ಮುಂಗಾರು ಹಂಗಾಮು ಜೋರು; ಭೂಮಿ ಹದಗೊಳಿಸಿ ಬಿತ್ತನೆ ಕಾರ್ಯ ಮಾಡುತ್ತಿರೋ ಅನ್ನದಾತರು..!
ಮುಂಡಗೋಡ- ತಾಲೂಕಿನಲ್ಲಿ ಮುಂಗಾರು ಹಂಗಾಮು ಶುರುವಾಗಿದೆ.. ಈಗಾಗಲೇ ತಾಲೂಕಿನ ರೈತರು ತಮ್ಮ ಗದ್ದೆಗಳನ್ನು ಸ್ವಚ್ಚಗೊಳಿಸಿದ್ದಾರೆ.. ಸಾಕಷ್ಟು ಮಳೆಯಾದ ಕಾರಣ ಭೂಮಿ ರಂಟೆ ಕುಂಟೆ ಹೊಡೆದು ಹದಗೊಳಿಸಿದ್ದಾರೆ.. ಅಲ್ದೇ ಸಾಕಷ್ಟು ಭಾಗಗಳಲ್ಲಿ ಈಗಾಗಲೇ ಬಿತ್ತನೆ ಕಾರ್ಯ ಚುರಿಕುಗೊಂಡಿದೆ.. ತಾಲೂಕಿನ ಸನವಳ್ಳಿ, ಬಾಚಣಕಿ, ಕಾತೂರು, ಪಾಳಾ ಸೇರಿದಂತೆ ಹಲವು ಕಡೆ ಈಗಾಗಲೇ ಗೋವಿನ ಜೋಳ, ಭತ್ತ ಸೇರಿದಂತೆ ಹಲವು ತಳಿಯ ಬೀಜಗಳ ಬಿತ್ತನೇ ಕಾರ್ಯ ಶುರುವಾಗಿದ್ದು ರೈತ ಲಾಕ್ ಡೌನ್ ಮದ್ಯೆಯೂ ಬ್ಯುಸಿಯಾಗಿದ್ದಾನೆ. ಇನ್ನು, ಬಿತ್ತನೆಗೆ ಬೇಕಾದ ಬೀಜ, ರಸಗೊಬ್ಬರಗಳ ಖರೀದಿಯೂ ಜೋರಾಗಿದ್ದು ತಾಲೂಕಾಡಳಿತ ರೈತರಿಗೆ ಬೀಜ ರಸಗೊಬ್ಬರಗಳ ಪೂರೈಕೆಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಿದೆ..
ಲಾಕ್ ಡೌನ್ ಸಂಕಷ್ಟದಲ್ಲಿದ್ದ ಮಹಾರಾಷ್ಟ್ರದ ಕುಟುಂಬಗಳಿಗೆ ದಿನಸಿ ವಿತರಣೆ..!
ಮುಂಡಗೋಡ-ತಾಲೂಕಿನ ಇಂದೂರಿನಲ್ಲಿ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆಂದು ಮಹಾರಾಷ್ಟ್ರದಿಂದ ಜೋಕಾಲಿ ಪ್ರದರ್ಶನಕ್ಕೆ ಬಂದಿದ್ದ ಕೂಲಿಕಾರ್ಮಿಕರಿಗೆ ಕೊಡುಗೈ ದಾನಿಗಳು ನೆರವಿನ ಹಸ್ತ ಚಾಚಿದ್ದಾರೆ.. ಇಂದೂ ಕೂಡ ಇಂದೂರಿನ ಅಂಗನವಾಡಿ ಹಾಗೂ ಆಶಾ ಕರ್ಯಕರ್ತರು ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ತರಕಾರಿ ಹಾಗೂ ದಿನಸಿ ವಿತರಿಸಿದ್ರು.. ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ಸುರಕೋಡ್, ಆಶಾ ಕಾರ್ಯಕರ್ತೆ ಲಕ್ಮೀ ಕೊಮ್ಮರಿಸಿಕೊಪ್ಪ ಸೇರಿ ಸಂಕಷ್ಟದಲ್ಲಿದ್ದ ಮಹಾರಾಷ್ಟ್ರದ ಕುಟುಂಬಗಳಿಗೆ ತರಕಾರಿ ಹಾಗೂ ದಿನಸಿ ವಿತರಿಸಿದ್ರು..
ಅರಟಾಳದಲ್ಲಿ ಸುಬ್ರಮ್ಮಣ್ಯ ಸ್ವಾಮಿಯ ಸನ್ನಿಧಾನ..!
ವಿಶೇಷ ವರದಿ ಕಾಳ ಸರ್ಪ ದೋಷ, ನಾಗದೋಷಗಳ ಪರಿಹಾರಕ್ಕಾಗಿ ಸಾಕಷ್ಟು ಜನ ಕುಕ್ಕೆ ಸುಬ್ರಮ್ಮಣ್ಯ ಕ್ಷೇತ್ರಕ್ಕೆ ಹೋಗ್ತಾರೆ.. ಆದ್ರೆ ಕುಕ್ಕೆ ಶ್ರೀ ಕ್ಷೇತ್ರದ ದಿವ್ಯ ಸನ್ನಿಧಾನದಂತೆಯೇ ಮತ್ತೊಂದು ಸನ್ನಿಧಾನ ನಮ್ಮ ಸಮೀಪದಲ್ಲೇ ಇದೆ.. ಹೌದು, ಶಿಗ್ಗಾವಿ ತಾಲೂಕಿನ ಅರಟಾಳ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಾಲಯ ಲದ ಆವರಣದಲ್ಲಿ ಶ್ರೀ ಸುಬ್ರಮ್ಮಣ್ಯ ಸ್ವಾಮಿ ನೆಲೆ ನಿಂತಿದ್ದಾರೆ.. ಭವ್ಯವಾದ ಆಲದ ಮರದ ಕೆಳಗೆ ವಿರಾಜಮಾನವಾಗಿರೋ ಸುಭ್ರಮ್ಮಣ್ಯ ಸ್ವಾಮಿಯ ದರ್ಶನಕ್ಕಾಗಿ ಭಕ್ತರ ದಂಡೇ ಹರಿದು ಬರತ್ತೆ.. ಇನ್ನು ಸರ್ಪದೋಷ, ಕಾಳಸರ್ಪದೋಷ ಮುಂತಾದ ದೋಷಗಳಿಂದ ಮುಕ್ತಿ ಪಡೆಯಲು ಇಲ್ಲಿ ಪ್ರತೀ ಗುರುವಾರ ಹಾಗೂ ಅಮವಾಸ್ಯೆ ದಿನಗಳಲ್ಲಿ ಇಲ್ಲಿಗೆ ನೂರಾರು ಸಂಖ್ಯೆಯಲ್ಲಿ ಭಕ್ತರು ಬರ್ತಾರೆ.. ಸುಬ್ರಮ್ಮಣ್ಯ ಶ್ರೀ ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗದೇ ಇರೋ ಬಹುತೇಕರು ಅರಟಾಳದ ದಿವ್ಯ ಸನ್ನಿಧಾನದಲ್ಲೇ ತಮ್ಮ ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಳ್ತಾರೆ. ಅಲ್ದೇ ಇಲ್ಲಿಯೇ ತಮ್ಮ ದೋಷ ನಿವಾರಣೆಯ ವೃತಗಳನ್ನು ಮಾಡ್ತಾರೆ.. ಅರಟಾಳಕ್ಕೆ ಹೋಗೋದು ಹೇಗೆ..? ನೀವು ಹುಬ್ಬಳ್ಳಿಯಿಂದ ತಡಸ ಮಾರ್ಗವಾಗಿ, ಹಾನಗಲ್ ಗೆ ಹೊರಟಿರುವಿರಿ...
ಶೇಂಗಾ ಬೆಳೆದ ತಾಲೂಕಿನ ರೈತನ ಬದುಕು ಮೂರಾಬಟ್ಟೆ; ಇದೇಲ್ಲ ತೌಕ್ತೆ ಚಂಡ ಮಾರುತದ ಎಫೆಕ್ಟ್ ಕಣ್ರಿ..!
ಮುಂಡಗೋಡ- ತಾಲೂಕಿನ ಅನ್ನದಾತ ಅಕ್ಷರಶಃ ಸಂಕಷ್ಟದಲ್ಲಿದ್ದಾನೆ. ಬೇಸಿಗೆ ಬೆಳೆಯಾಗಿ ಸಾವಿರಾರು ರೂ. ಖರ್ಚು ಮಾಡಿ ಶೇಂಗಾ ಬೆಳೆದಿದ್ದ ರೈತನ ಬದುಕು ಈಗ ಮೂರಾಬಟ್ಟೆಯಾಗಿದೆ. ತೌಕ್ತೆ ಚಂಡ ಮಾರುತದ ಎಫೆಕ್ಟ್ ನಿಂದಾಗಿ ಶೇಂಗಾ ಬೆಳೆದಿದ್ದ ರೈತನಿಗೆ ಈಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.. ಯಸ್, ಬಂದಷ್ಟು ಬರಲಿ ಅಂತಾ ತನ್ನ ಗದ್ದೆಯಲ್ಲಿ ಬೆಳೆದು ಮಳೆಯ ನೀರಲ್ಲಿ ಕೊಳೆತು ಹೋಗಿರೋ ಶೇಂಗಾ ಬೆಳೆಯನ್ನು ಒಕ್ಕಲು ಮಾಡುತ್ತಿರೋ ರೈತನ ಮನಸಲ್ಲಿ ಅಕ್ಷರಶಃ ಆತಂಕವಿದೆ.. ಸಾಲ ಸೋಲ ಮಾಡಿ ಬೆಳೆದಿದ್ದ ಬೆಳೆಯೇಲ್ಲ ಬರ್ಬಾದಾಗಿ ಹೋಗಿ, ಇನ್ನು ಹೇಗಪ್ಪಾ ಸಾಲ ತೀರಿಸೋದು ಅಂತಾ ಅನ್ನದಾತ ಚಿಂತೆಗೀಡಾಗಿದ್ದಾನೆ.. ಅಂದಹಾಗೆ, ಇದು ಮುಂಡಗೋಡ ತಾಲೂಕಿನ ಹುನಗುಂದ, ಇಂದೂರು, ಕೊಪ್ಪ, ನಂದಿಕಟ್ಟಾ, ಅರಶಿಣಗೇರಿ, ಬಾಚಣಕಿ ಗ್ರಾಮಗಳ ರೈತರ ಗೋಳು. ಈ ವರ್ಷ ಬೇಸಿಗೆ ಬೆಳೆಯಾಗಿ ಶೇಂಗಾ ಬೆಳೆದಿದ್ದ ರೈತರು ಕಣ್ಣೀರು ಹಾಕುತ್ತಿದ್ದಾರೆ.. ಇತ್ತೀಚೆಗೆ ಸುರಿದ ಭಾರೀ ಮಳೆ ಈ ರೈತರ ಬದುಕನ್ನೇ ಕಿತ್ತುಕೊಂಡಿದೆ.. ಹುಲುಸಾಗಿ ಬೆಳೆದಿದ್ದ ಶೇಂಗಾ ಬೆಳೆಯೇಲ್ಲ, ಅಕಾಲಿಕ ಮಳೆಯ...
ನಂದಿಕಟ್ಟಾ ಗ್ರಾಮದ ಪುರಾತನ ಬಸವಣ್ಣ ದೇವಾಲಯ ಈಗ ನವನವೀನ..!
ವಿಶೇಷ ವರದಿ.. ಮುಂಡಗೋಡ ತಾಲೂಕು ಅಂದ್ರೆ ಪುಟ್ಟದೊಂದು ಪ್ರಪಂಚ ಇದ್ದಂಗೆ.. ಒಮ್ಮೆ ನೀವು ಮುಂಡಗೋಡ ತಾಲೂಕನ್ನು ಸುತ್ತಿ ಬಂದ್ರೆ ಸಾಕು ಇಡೀ ವಿಶ್ವವನ್ನೇ ಸುತ್ತಿ ಬಂದಷ್ಟು ಜ್ಙಾನ ಸಿಗೋದು ಗ್ಯಾರಂಟಿ.. ಇಲ್ಲಿನ ವೈವಿದ್ಯತೆ ಅನ್ನೋದೇ ಹಾಗಿದೆ.. ಯಾಕಂದ್ರೆ ಇಲ್ಲಿ ಜಗತ್ತಿನಾದ್ಯಂತ ಇರೋ ಬಹುತೇಕ ಜನಾಂಗಗಳು ನೆಲೆ ನಿಂತಿವೆ.. ಟಿಬೇಟಿಗರು, ಸಿದ್ದಿಗಳು, ಲಂಬಾಣಿಗರು, ಗೌಳಿಗರು ಹೀಗೆ ವಿವಿಧ ಜನಾಂಗಗಳು ಇಲ್ಲಿ ನೆಲೆ ನಿಂತಿವೆ.. ಹೀಗಾಗಿ ವಿಶ್ವದ ಬಹುತೇಕ ಜನಾಂಗಗಳನ್ನು ಮುಂಡಗೋಡ ತಾಲೂಕಿನಲ್ಲಿ ಕಾಣಬಹುದು… ಇದು ನಮ್ಮೇಲ್ಲರ ಹೆಮ್ಮೆ.. ಇನ್ನು ಇಲ್ಲಿನ ಜನಾಂಗಗಳ ವಿವಿಧ ಪ್ರಕಾರದ ಪಾರಂಪರಿಕ ಸೊಗಡು ಒಂದೆಡೆಯಾದ್ರೆ, ಮತ್ತೊಂದೆಡೆ ಐತಿಹಾಸಿಕ ತಾಣಗಳ ಸೊಬಗೂ ಕಣ್ಮನ ಸೆಳೆಯುತ್ತವೆ.. ಅದ್ರಲ್ಲೂ ತಾಲೂಕಿನ ನಂದಿಕಟ್ಟಾ ಗ್ರಾಮದ ಪುರಾತನ ಬಸವಣ್ಣನ ದೇವಾಲಯ ಕಣ್ಮನ ಸೆಳೆಯುತ್ತಿದೆ.. ಇನ್ನು ನಂದಿಕಟ್ಟಾ ಗ್ರಾಮದ ಪುರಾತನ ಬಸವಣ್ಣನ ದೇವಾಲಯಕ್ಕೆ ರಾಜ್ಯಾದೆಲ್ಲೆಡೆಯಿಂದ ನಿತ್ಯವೂ ನೂರಾರು ಭಕ್ತರು ಬಂದು ದರ್ಶನ ಪಡಿತಾರೆ.. ಇನ್ನು ಈ ದೇವಾಲಯದ ಗೋಡೆಯ ಮೇಲೆ ವಿಶೇಷ ಮೀನಿನ ಉಬ್ಬು ಶಿಲ್ಪವಿದ್ದು ದೇವಸ್ಥಾನಕ್ಕೆ...
ಲಾಕ್ ಡೌನ್ ಎಫೆಕ್ಟ್- ಶುಂಠಿ ಬೆಳೆದ ರೈತನ ಬದುಕೇ ಕಗ್ಗಂಟು..!
ಮುಂಡಗೋಡ- ತಾಲೂಕಿನಲ್ಲಿ ಶುಂಠಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್ ಡೌನ್ ಹಿನ್ನೆಲೆ ಶುಂಠಿ ಬೆಲೆ ದಿಢೀರನೆ ಕುಸಿದ ಪರಿಣಾಮ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶುಂಠಿ ಬೆಳೆದಿದ್ದ ರೈತನಿಗೆ ಸದ್ಯ ಲಾಕ್ ಡೌನ್ ಇರೋ ಕಾರಣಕ್ಕೆ, ಶುಂಠಿ ಖರೀದಿಸುವ ವ್ಯಾಪಾರಸ್ಥರು ಬರುತ್ತಿಲ್ಲ.. ಹೀಗಾಗಿ ಇಲ್ಲಿನ ಕೆಲವು ಸ್ಥಳೀಯ ವ್ಯಾಪಾರಿಗಳು 60 ಕೆಜಿಯ ಶುಂಠಿ ಚೀಲಕ್ಕೆ 600 ರಿಂದ 700 ರೂಪಾಯಿ ದರಕ್ಕೆ ಕೇಳುತ್ತಿದ್ದಾರೆ. ಹೀಗಾಗಿ, ಶುಂಠಿ ಬೆಳೆಯಲು ಮಾಡಿದ್ದ ಖರ್ಚೂ ಸಹ ಬರದಾಗಿದೆ ಅಂತಾ ರೈತರು ಚಿಂತೆಗೀಡಾಗಿದ್ದಾರೆ. ಲಕ್ಷಾಂತರ ರುಇಪಾಯಿ ಖರ್ಚು ಮಾಡಿ ಶುಂಠಿ ಬೆಳೆದಿರೊ ರೈತರು ಈಗ ಕೈ ಚೆಲ್ಲಿ ಕುಳಿತಿದ್ದಾರೆ. ಹೀಗಾಗಿ ಶುಂಠಿ ಖರೀಧಿಗಾಗಿ ಸರ್ಕಾರ ವ್ಯವಸ್ಥೆ ಮಾಡಬೇಕು ಅಂತಾ ರೈತರು ಆಗ್ರಹಿಸ್ತಿದಾರೆ..
ಲಾಕ್ ಡೌನ್ ಹಿನ್ನೆಲೆ- ಮುಂಡಗೋಡ ಸಂಪೂರ್ಣ ಸ್ತಬ್ದ; ಫಿಲ್ಡಿಗಿಳಿದ ಪೊಲೀಸ್ರು..!
ಮುಂಡಗೋಡ-ತಾಲೂಕಿನಲ್ಲಿ ಮತ್ತೆ ಕಠಿಣ ಲಾಕ್ ಡೌನ್ ಜಾರಿಯಾದ ಎರಡನೇ ದಿನದ ಹಿನ್ನೆಲೆಯಲ್ಲಿ ಪೊಲೀಸ್ರು ಫಿಲ್ಡಿಗಿಳಿದಿದ್ರು. ಮುಂಡಗೋಡ ಪಟ್ಟಣದ ಎಲ್ಲಾ ರಸ್ತೆಗಳಿಗೂ ಬ್ಯಾರಿಕೇಡ್ ಹಾಕಿ ಪಟ್ಟಣದ ಒಳಗೆ ಅಥವಾ ಹೊರ ಹೋಗುವ ವಾಹನಗಳ ತಪಾಸಣೆ ಮಾಡುತ್ತಿದ್ದಾರೆ.. ಈ ಮೂಲಕ ಅನಗತ್ಯವಾಗಿ ತಿರುಗಾಡುವ ವಾಹನ ಸವಾರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.. ಮುಂಡಗೋಡ ಪಟ್ಟಣಕ್ಕೆ ಸಂಪರ್ಕಿಸುವ ಎಲ್ಲಾ ಮಾರ್ಗಗಳಲ್ಲೂ ಬ್ಯಾರಿಕೇಡ್ ಹಾಕಿ ತಪಾಸಣೆ ನಡೆಸುತ್ತಿರೋ ಪೊಲೀಸ್ರು, ಅನಗತ್ಯ ಸಂಚರಿಸೊ ವಾಹನಗಳು ಬಂದ್ರೆ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ.. ವಾಹನ ಸವಾರರ ಜೊತೆ ಕೂಲಂಕುಶವಾಗಿ ಚರ್ಚಿಸಿ ಒಂದುವೇಳೆ ಅಗತ್ಯವಿದ್ದಲ್ಲಿ ಮಾತ್ರ ಬಿಡುತ್ತಿದ್ದಾರೆ.. ಹೀಗಾಗಿ ಪಟ್ಟಣದಲ್ಲಿ ಅನಗತ್ಯ ಓಡಾಡುವವರ ಹಾವಳಿ ಕೊಂಚ ತಣ್ಣಗಾಗಿದೆ.
ಮುಂಡಗೋಡ ಕೃಷಿ ಇಲಾಖೆ ಬೇಜವಾಬ್ದಾರಿ; ಕೋವಿಡ್ ನಿಯಮ ಪಾಲಿಸದ ರೈತರು..!
ಮುಂಡಗೋಡ-ಪಟ್ಟಣದಲ್ಲಿರೋ ಕೃಷಿ ಇಲಾಖೆಯಲ್ಲಿ ರೈತರಿಗೆ ಬಿತ್ತನೆಗೆ ಬೀಜ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ತಾಲೂಕಿನ ರೈತರು ಇಂದು ಬಿತ್ತನೆ ಬೀಜಗಳ ಖರೀದಿಗಾಗಿ ಮುಗಿ ಬಿದ್ದಿದ್ರು.. ಆದ್ರೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ, ಸಾಮಾಜಿಕ ಅಂತರ ಮರೆತು ಬೀಜ ಖರೀಧಿಸುತ್ತಿದ್ದ ರೈತರಿಗೆ ಇಲಾಖೆಯ ಅಧಿಕಾರಿಗಳು ಕೋವಿಡ್ ನಿಯಮ ಪಾಲಿಸುವಂತೆ ಯಾವುದೇ ನಿರ್ದೇಶನ ನೀಡದೇ ಕಣ್ಮುಚ್ವಿ ಕುಳಿತಿದ್ರು.. ಕೃಷಿ ಇಲಾಖೆಯ ಆವರಣದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ರೈತರು ಯಾವುದೇ ಸಾಮಾಜಿಕ ಅಂತರ ಪಾಲಿಸಲಿಲ್ಲ. ಅಲ್ಲದೇ ಅದೇಷ್ಟೋ ರೈತರು ಮಾಸ್ಕ್ ಕೂಡ ಧರಿಸಿರಲಿಲ್ಲ. ಆದರೂ ಅಂತಹ ರೈತರಿಗೆ ತಿಳುವಳಿಕೆ ನೀಡದೆ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದು ಮಾತ್ರ ವಿಪರ್ಯಾಸ..