ಹುಲುಗೂರು ಶೂಟೌಟ್ ಗೆ ಮುಂಡಗೋಡಿನಲ್ಲಿ ಸುಪಾರಿ..? ಖಾಕಿ ಕಂಡು ಎಸ್ಕೇಪ್ ಆದ್ನಾ ಆರೋಪಿ..?

ಶಿಗ್ಗಾವಿ ತಾಲೂಕಿನ ಹುಲಗೂರಿನಲ್ಲಿ ನಡೆದಿದ್ದ ಶೂಟೌಟ್ ಪ್ರಕರಣದಲ್ಲಿ ಪತಿಯೇ ತನ್ನ ಪತ್ನಿಯ ಹತ್ಯೆಗೆ ಸುಪಾರಿ ಕೊಟ್ಟಿದ್ನಾ..? ಅಷ್ಟಕ್ಕೂ ಆ “ಸುಪಾರಿ” ಕೈ ಬದಲಾಯಿಸಿದ್ದು ಮುಂಡಗೋಡಿನಲ್ಲಾ..? ಯಸ್, ಇಂತಹದ್ದೊಂದು ಅನುಮಾನ ಶಿಗ್ಗಾವಿ ಪೊಲೀಸರಿಗೆ ತಲೆ ಹೊಕ್ಕಿದೆ. ಯಾಕಂದ್ರೆ, ಅವತ್ತು ಗುಂಡಿನ ದಾಳಿ ಮಾಡಲು ಬಂದಿದ್ದ ಆ ಇಬ್ಬರಲ್ಲಿ ಓರ್ವ ಮುಂಡಗೋಡ ತಾಲೂಕಿನ ಆ ಗ್ರಾಮದವನಂತೆ.. ಆದ್ರೆ, ಆತ ಈ ಕ್ಷಣದವರೆಗೂ ಪೊಲೀಸರ ಕೈಗೆ ಸಿಕ್ಕೇ ಇಲ್ಲ ಅನ್ನೋ ಮಾಹಿತಿ ಗೊತ್ತಾಗಿದೆ. ಆದ್ರೆ, ಪೊಲೀಸರು ಮಾತ್ರ ಸುಮ್ನೆ ಕುಳಿತಿಲ್ಲ. ಕಾರ್ಯಾಚರಣೆ ಜಾರಿಯಲ್ಲಿಟ್ಟಿದ್ದಾರೆ.

ಇಬ್ಬರೂ ಸುಪಾರಿ ಪಡೆದ್ರಾ..?
ಅಷ್ಟಕ್ಕೂ, ಮೇ 24 ರ ರಾತ್ರಿ ಸಲ್ಮಾ ಬಾನು ಹತ್ಯೆಗೆ ಗುಂಡು ಹಾರಿಸಿದ್ದ ಆ ಇಬ್ಬರೂ ವ್ಯಕ್ತಿಗಳು ಪತಿಯಿಂದಲೇ ಸುಪಾರಿ ಪಡೆದು ಕೃತ್ಯ ನಡೆಸಲು ಬಂದಿದ್ರು ಅನ್ನೋ ಅನುಮಾನ ಪೊಲೀಸರಿಗೆ ಬಲವಾಗಿದೆ‌. ಆದ್ರೆ, ಘಟನೆ ನಡೆದ ಕೆಲವೇ ಹೊತ್ತಲ್ಲಿ ಸಲ್ಮಾಬಾನು ಕೊಟ್ಟ ಮಾಹಿತಿ ಆಧಾರದಲ್ಲಿ ಹುಬ್ಬಳ್ಳಿ ತಾಲೂಕಿನ ಅರಳಿಕಟ್ಟಿಯಲ್ಲಿ ಎಗ್ ರೈಸ್ ಬೇಯಿಸುತ್ತಿದ್ದ ಆಕೆಯ ಪತಿ ಅಬ್ದುಲ್ ಖಾದರ್ ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಅನ್ನೋ ಮಾಹಿತಿ ಇದೆ. ಹೀಗಾಗಿ, ಅವನೇ ಇಂತಹದ್ದೊಂದು ಮಾಹಿತಿ ಪೊಲೀಸರಿಗೆ ನೀಡಿದ್ದಾನೆ ಎನ್ನಲಾಗಿದ್ದು, ಸುಪಾರಿ ಪಡೆದು ಹತ್ಯೆಗೆ ಸಂಚು ರೂಪಿಸಲಾಗಿತ್ತು ಅನ್ನೋ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಮುಂಡಗೋಡಿನ ಲಿಂಕ್..?
ಇದು ನಿಜಕ್ಕೂ ಅಚ್ಚರಿಯ ಸಂಗತಿಯೇ, ಯಾಕಂದ್ರೆ ಹುಲಗೂರಿನಲ್ಲಿ ನಡೆದ ಶೂಟೌಟ್ ಕೇಸ್ ಗೂ ಮುಂಡಗೋಡ ತಾಲೂಕಿಗೂ ಬಹುತೇಕ ಲಿಂಕ್ ಖಾತ್ರಿಯಾಗಿದೆ. ಈ ಮಾತನ್ನು “ಪಬ್ಲಿಕ್ ಫಸ್ಟ್” ನಿನ್ನೆಯೇ ನಿಮ್ಮ ಮುಂದೆ ಬಹಿರಂಗಗೊಳಿಸಿತ್ತು. ಅಂದಹಾಗೆ, ಮುಂಡಗೋಡಿನಿಂದ ಕಲಘಟಗಿ ಮಾರ್ಗವಾಗಿ ನೀವು ಹೊರಟಿರುವಿರಾದ್ರೆ, ಅಲ್ಲಿಂದ ಕೇವಲ 10 ಕಿ ಮೀ. ಒಳಗಡೆಯೇ ಇರುವ ಅದೊಂದು ಗ್ರಾಮದಲ್ಲಿ ಆರೋಪಿ ಮನೆಯಿದೆ. ಬಂದೂಕು ಕೂಡ ಆತನ ಸುಪರ್ದಿಯಲ್ಲಿದೆಯಂತೆ, ಇಂತಹದ್ದೊಂದು ಖಚಿತ ಮಾಹಿತಿ ಪೊಲೀಸರಿಗೆ ಗೊತ್ತಾಗಿದೆಯಂತೆ, ಹೀಗಾಗಿನೇ ನಿನ್ನೆ ಇಡೀ ದಿನ ಶಿಗ್ಗಾವಿ ಪೊಲೀಸ್ರು ಮುಂಡಗೋಡ ತಾಲೂಕಿನಲ್ಲಿ ಆರೋಪಿಗಾಗಿ ತಡಕಾಡಿ ಹೋಗಿದ್ದಾರೆ. ಆದ್ರೆ, ಆರೋಪಿ ಮಾತ್ರ ನಿನ್ನೆ ಮದ್ಯಾಹ್ನ ಮೂರೂವರೆ ಗಂಟೆಯವರೆಗೂ ವರೆಗೂ ಅಲ್ಲೇ ಇದ್ದವನು, ಇನ್ನೇನು ಪೊಲೀಸ್ರು ಕದ ತಟ್ಟುತ್ತಾರೆ ಅಂತಾ ಗೊತ್ತಾದ ಕ್ಷಣಮಾತ್ರದಲ್ಲೇ ಗ್ರೇಟ್ ಎಸ್ಕೇಪ್ ಆಗಿದ್ದಾನೆ ಅನ್ನೊ ಮಾಹಿತಿ ಲಭ್ಯವಾಗಿದೆ‌. ಹೀಗಾಗಿ, ಶಿಗ್ಗಾವಿ ಪೋಲಿಸರು ಬರಿಗೈಯಲ್ಲಿ ವಾಪಸ್ ಹೋಗಿದ್ದಾರಂತೆ.

ಪೊಲೀಸರು ಯಡವಿದ್ರಾ..?
ನಿಜ ಅಂದ್ರೆ, ಶಿಗ್ಗಾವಿ ಪೊಲೀಸರು, ಘಟನೆಯ ಆರೋಪಿಯ ಬಗ್ಗೆ ಸುಳಿವು ಸಿಕ್ಕ ಕೂಡಲೇ ಮುಂಡಗೋಡ ಪೊಲೀಸರಿಗೆ ಸೂಕ್ಷ್ಮವಾಗಿ ಪುಟ್ಟದೊಂದು ಮಾಹಿತಿ ನೀಡಿ, ಚಕ್ರವ್ಯೂಹ ರಚಿಸಿದ್ದಿದ್ದರೆ ಇಷ್ಟೊತ್ತಿಗಾಗಲೇ ಆರೋಪಿ ಪೊಲೀಸರ ಬಲೆಗೆ ಬಿದ್ದು ಹಳೆ ಮಾತಾಗುತ್ತಿತ್ತಂತೆ. ಆದ್ರೆ, ಶಿಗ್ಗಾವಿ ಪೊಲೀಸರು ಸ್ಥಳೀಯ ಪೊಲೀಸರನ್ನ ಸಮರ್ಪಕವಾಗಿ ಬಳಸಿಕೊಳ್ಳದೇ ತಮ್ಮದೇ ಶೈಲಿಯನ್ನ ಪ್ರಯೋಗಿಸಲು ಹೋಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ಆರೋಪಿ ಆ ಗ್ರಾಮದಿಂದ ನಿನ್ನೆಯೇ ಎಸ್ಕೇಪ್ ಆಗಿದ್ದಾನಂತೆ.

ಕಲಘಟಗಿಯಲ್ಲಿ…
ಅಸಲು, ಮುಂಡಗೋಡ ತಾಲೂಕಿನ ಆ ಗ್ರಾಮದಿಂದ ಎಸ್ಕೇಪ್ ಆಗಿರೋ ಆರೋಪಿ, ಕೆಲವೇ ಹೊತ್ತಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಆತನ “ಲೊಕೇಶನ್” ಪಕ್ಕಾ ಆಗಿದೆ. ಆದ್ರೆ ಅದೇ ಕೊನೆ, ಆನಂತರ ಅವನು ಅಕ್ಷರಶಃ ನಾಪತ್ತೆಯಾಗಿದ್ದಾನಂತೆ. ಸದ್ಯ ಆತ ಹೊರರಾಜ್ಯದ ಬೀಚುಗಳಲ್ಲಿ ಬ್ಯುಸಿಯಾಗಿರೋ ಸಾಧ್ಯತೆ ಇದ್ದು, ಪೊಲೀಸರ ತಂಡ ಬೆನ್ನತ್ತಿದೆ.

ಸಿಎಂ ಕ್ಷೇತ್ರದ ಹೈ ಪ್ರೆಶರ್..!
ನಿಜ, ಸಿಎಂ ಬಸವರಾಜ್ ಬೊಮ್ಮಾಯಿ ತವರು ಕ್ಷೇತ್ರದಲ್ಲಿ ಎರಡೆರಡು ಬಾರಿ ಗುಂಡಿನ ಸದ್ದು ಕೇಳುತ್ತದೆ ಅಂದ್ರೆ ಅದು ಸಣ್ಣ ಮಾತಾ..? ಹೀಗಾಗಿನೇ ಹಾವೇರಿ ಪೊಲೀಸರ ಮೇಲೆ ಇನ್ನಿಲ್ಲದ ಪ್ರೆಶರ್ ಇದೆ‌. ಹೀಗಾಗಿ, ಶಿಗ್ಗಾವಿಯ ಈ ಕೇಸ್ ಸಂಬಂಧ ಇಡೀ ಹಾವೇರಿ ಪೊಲೀಸ್ ಪಡೆ ಶ್ರಮಿಸುತ್ತಿದೆ. ಸತ್ಯ ಅಂದ್ರೆ ರಾಜಧಾನಿಯಿಂದಲೇ ಈ ಕೇಸ್ ನ ಪ್ರತಿಕ್ಷಣದ ಅಪಡೇಟ್ ಕೇಳಲಾಗ್ತಿದೆ‌ಯಂತೆ.
ಹೀಗಾಗಿ ಕೇಸ್ ನ ಅಸಲೀ ಆರೋಪಿಗಳನ್ನ ಹೆಡೆಮುರಿ ಕಟ್ಟಲು ಹಾವೇರಿಯ ಬಲಿಷ್ಟ ಟೀಂ ಸನ್ನದ್ದವಾಗಿದೆಯಂತೆ.

error: Content is protected !!